ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೊಡಗಿನಲ್ಲಿ ಪೋಲಿಯೋ ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಡಗಿನಲ್ಲಿ ಪೋಲಿಯೋ ಪತ್ತೆ
ಕೊಡಗಿನಲ್ಲಿ ಪೋಲಿಯೋ ಪ್ರಕರಣವೊಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ರಾಜ್ಯ ಆರೋಗ್ಯ ಸಂಸ್ಥೆಗಳು ಮುಂದಾಗಿವೆ.

ಪೊಲ್ಲಿಬೆಟ್ಟ ಸಮೀಪದ ಚನ್ನಯ್ಯನಕೋಟೆ ಮೆಕೂರಿನ ಸಿರಾಜುದ್ದೀನ್ 11 ವರ್ಷದ ಬಾಲಕ ಪಿ1 ಮಾದರಿಯ ಪೋಲಿಯೋದಿಂದ ಬಳಲುತ್ತಿರುವುದಾಗಿ ರೋಟರಿ ಜಿಲ್ಲಾ ಪಲ್ಸ್ ಪೋಲಿಯೋ ಸಮಿತಿ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.

ನಿರಂತರ ಜ್ವರದಿಂದ ಬಳಲಾರಂಭಿಸಿದ ಬಾಲಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಪ್ರಕರಣ ಪತ್ತೆಯಾಯಿತು. ರಾಜು ಲಸಿಕಾ ಅಧಿಕಾರಿ ಡಾ.ಮೋಹನ್ ರಾಜ್, ಪುಟ್ಟರಾಜು, ಡಿಎಚ್ಒ ಶಿವರಾಮ್ ನಾಯಕ್ ಅವರನ್ನೊಳಗೊಂಡ ತಂಡ ಬಾಲಕನ ಗ್ರಾಮಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿತು. ಕೊಡಗು, ದಕ್ಷಿಣ ಕನ್ನಡ, ಮೈಸೂರು ಮತ್ತು ಕೇರಳದಲ್ಲಿ 16 ರಂದು ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ರೋಟರಿ ಹಾಗೂ ಸರ್ಕಾರಕ್ಕೆ 180 ಕೋಟಿ ರೂ.ವೆಚ್ಚವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕನ್ನಡೇತರ ಹೆಸರುಗಳಿರುವ ಚಿತ್ರಗಳಿಗೆ ಎಳ್ಳುನೀರು
ರಾಂಚಿ:ರಾಜ್ ಠಾಕ್ರೆ ವಿರುದ್ಧ ಕೊಲೆ ಮೊಕದ್ದಮೆ
ಹೈ-ಕ ಅಭಿವೃದ್ಧಿಗೆ ಒತ್ತು: ಯಡಿಯೂರಪ್ಪ
ಆರೋಗ್ಯ ಕವಚ: ಅಬ್ದುಲ್ ಕಲಾಂ ಉದ್ಘಾಟನೆ
ಮೈತ್ರಿ ಕುರಿತು ಮಾತನಾಡಿದರೆ ಎಚ್ಚರ: ದೇಶಪಾಂಡೆ
ಕನ್ನಡದ ಅಭಿವೃದ್ಧಿಗೆ 25 ಕೋಟಿ: ಯಡಿಯೂರಪ್ಪ