ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಮರ್ಥ ನಾಯಕತ್ವ ಅಗತ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಮರ್ಥ ನಾಯಕತ್ವ ಅಗತ್ಯ
ಶಾಸ್ತ್ತ್ರೀಯ ಸ್ಥಾನಮಾನದಿಂದ ದೊರಕುವ ಉಪಯೋಗಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಬೇಕು ಎಂದು ಸಂಶೋಧಕ ಡಾ.ಎಂ. ಚಿದಾನಂದ ಮೂರ್ತಿ ಹೇಳಿದರು.

ಕನ್ನಡ ಭಾಷೆ ಸಂಪದ್ಭರಿತ ಸಾಹಿತ್ಯ ಪರಂಪರೆ ಹೊಂದಿದೆ. ಆದರೆ, ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಕೆಲಸ ಸಾಲದು. ಈಗ ಶಾಸ್ತ್ತ್ರೀಯ ಸ್ಥಾನಮಾನವೂ ಸಂದಿರುವುದರಿಂದ ರಾಜ್ಯ ಸರ್ಕಾರ, ಕನ್ನಡ ಚಿಂತಕರು, ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ತಕ್ಷಣ ಕ್ರಿಯಾಶೀಲರಾಗಬೇಕು ಎಂದರು.

ನಾಗಭೂಷಣ ಮಾತನಾಡಿ, ಕನ್ನಡ ನಾಡು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಕಾರಣ ಸಮರ್ಥ ನಾಯಕತ್ವದ ಕೊರತೆ. ಇದನ್ನು ನೀಗಿಸುವಲ್ಲಿ ಕನ್ನಡಪರ ಸಂಘಟನೆಗಳು ಮುಂದಾಗಲಿ ಎಂದರು.

ಮೆರವಣಿಗೆ ಮೇಲೆ ಕಲ್ಲು ತೂರಾಟ:

ಕನ್ನಡ ರಾಜ್ಯೋತ್ಸವ ಮೆರವಣಿಗೆ ಸಾಗುತ್ತಿದ್ದ ವೇಳೆ ಮಹಾರಾಷ್ಟ್ತ್ರ ಏಕೀಕರಣ ಸಮಿತಿಯ ಬೆಂಬಲಿಗರು ಕಲ್ಲು ತೂರಿದ ಪರಿಣಾಮ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಎಂಇಎಸ್ ಕಾರ್ಯಕರ್ತರ ದಾಳಿಗೆ ಪ್ರತಿಯಾಗಿ ಮೆರವಣಿಗೆಯಲ್ಲಿದ್ದವರು ಕಲ್ಲು ತೂರಾಟ ನಡೆಸಿದ್ದರಿಂದ ಇಬ್ಬರ ತಲೆಗೆ ಗಾಯವಾಗಿದೆ.ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೊಡಗಿನಲ್ಲಿ ಪೋಲಿಯೋ ಪತ್ತೆ
ಕನ್ನಡೇತರ ಹೆಸರುಗಳಿರುವ ಚಿತ್ರಗಳಿಗೆ ಎಳ್ಳುನೀರು
ರಾಂಚಿ:ರಾಜ್ ಠಾಕ್ರೆ ವಿರುದ್ಧ ಕೊಲೆ ಮೊಕದ್ದಮೆ
ಹೈ-ಕ ಅಭಿವೃದ್ಧಿಗೆ ಒತ್ತು: ಯಡಿಯೂರಪ್ಪ
ಆರೋಗ್ಯ ಕವಚ: ಅಬ್ದುಲ್ ಕಲಾಂ ಉದ್ಘಾಟನೆ
ಮೈತ್ರಿ ಕುರಿತು ಮಾತನಾಡಿದರೆ ಎಚ್ಚರ: ದೇಶಪಾಂಡೆ