ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೌದ್ದಧರ್ಮಕ್ಕೆ ಮತಾಂತರವಾಗಬೇಡಿ: ಪೇಜಾವರಶ್ರೀ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೌದ್ದಧರ್ಮಕ್ಕೆ ಮತಾಂತರವಾಗಬೇಡಿ: ಪೇಜಾವರಶ್ರೀ
ಬೌದ್ದ ಧರ್ಮವು ಹಿಂದೂ ಧರ್ಮದ ಒಂದು ಭಾಗವಾಗಿದೆ. ಆದರೂ ಅನೇಕ ದಲಿತರು ಬೌದ್ದ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ. ಹಾಗೆ ಮತಾಂತರಗೊಳ್ಳುವ ಮುನ್ನ ಒಂದಿಷ್ಟು ಅವಲೋಕನ ಮಾಡಿಕೊಳ್ಳುವಂತೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ವಿಶ್ವಹಿಂದೂ ಪರಿಷತ್ತಿನ ಧರ್ಮ ಸಂಸತ್ತಿನ ಅನೇಕ ಬೌದ್ದ ಗುರುಗಳೂ ಭಾಗವಹಿಸಿ ಪರಿಷತ್ತಿನ ಕಾರ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ. ಅಂತಹ ಬೌದ್ದ ಧರ್ಮವನ್ನು ಸ್ವೀಕರಿಸಲು ಎಲ್ಲರಿಗೂ ಹಕ್ಕಿದೆ.

ಸ್ವಯಂ ಪ್ರೇರಿತ ಮತಾಂತರಕ್ಕೆ ವಿರೋಧವಿಲ್ಲ. ಆದರೆ ಬೌದ್ದ ಧರ್ಮದಲ್ಲಿ ಹಿಂದೂ ಧರ್ಮದಂತೆ ಜಾತಿ ವ್ಯವಸ್ಥೆ ಇಲ್ಲ. ಅದನ್ನೇ ಕಾರಣವಾಗಿಟ್ಟುಕೊಂಡು ಆ ಧರ್ಮಕ್ಕೆ ಮತಾಂತರ ಆಗುತ್ತಿದ್ದೇವೆ ಎನ್ನುವುದು ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ಬೌದ್ದ ಧರ್ಮ ಈ ಜಗತ್ತೆಲ್ಲವೂ ಪೂರ್ಣ ಅಸತ್ಯವೆಂದು ಪ್ರತಿಪಾದಿಸುತ್ತದೆ. ವಿಶ್ವವು ಶೂನ್ಯ ಅಥವಾ ವಿಜ್ಞಾನ ಯುಗದಲ್ಲಿ ಪ್ರಶ್ನಾರ್ಹವಾಗಿದೆ. ಆಧುನಿಕ ಬುದ್ಧಿಜೀವಿಗಳು ಹಿಂದೂ ಧರ್ಮದ ಬಗ್ಗೆ ಮಾಡುತ್ತಿರುವ ಅವಹೇಳನಗಳು ಬೌದ್ದ ಧರ್ಮದಲ್ಲಿಯೂ ಅಡಕವಾಗಿದೆ.

ಹಾಗಿದ್ದರೂ ವರ್ಣಾಶ್ರಮದ ವ್ಯವಸ್ಥೆ ಬೌದ್ದರಲ್ಲಿಲ್ಲ ಎಂಬುದೊಂದೇ ಕಾರಣದಿಂದ ಆ ಧರ್ಮಕ್ಕೆ ಮತಾಂತರಗೊಳ್ಳುವುದು ಸೂಕ್ತವೇ ? ಎಂದೂ ಅವರು ಪ್ರಶ್ನಿಸಿದ್ದಾರೆ.

ಅದರ ಬದಲು ಜಾತಿ ವ್ಯವಸ್ಥೆಯನ್ನೇ ಧಿಕ್ಕರಿಸಿ ಎಲ್ಲರಿಗೂ ಸಮಾನತೆ ಘೋಷಿಸಿರುವ ದಯಾನಂದ ಸರಸ್ವತಿ ಅವರ ಆರ್ಯ ಸಮಾಜಕ್ಕೆ ದಲಿತರು ಸೇರಿವುದು ಹೆಚ್ಚು ಉಪಯುಕ್ತವೆನಿಸುತ್ತದೆ. ಬೌದ್ದ ಧರ್ಮಕ್ಕೆ ದಲಿತರು ಸೇರುವುದರಿಂದ ದಲಿತರಿಗೆ ವಿಶೇಷ ಲಾಭವಾಗದು.

ಪೇಜಾವರ ಮಠವಂತೂ ದಲಿತರನ್ನು ಯಾವ ಕಾರಣಕ್ಕೂ ಕಡೆಗಣಿಸುತ್ತಿಲ್ಲ. ಜಾತಿ ಭೇದವಿಲ್ಲದೆ ಭಕ್ತಿ ದೀಕ್ಷೆ ಹಾಗೂ ಮಂತ್ರದೀಕ್ಷೆ ಕೊಡಲು ಸಿದ್ದ ಎಂದೂ ಅವರು ತಿಳಿಸಿದ್ದಾರೆ.

ಆದರೆ ವಿಶೇಷ ದೀಕ್ಷೆಗೆ ಮಾತ್ರ ಲಿಂಗ ದೀಕ್ಷೆಗೆ ಬಸವಣ್ಣನವರು ವಿಧಿಸಿದಂತೆ ಕೆಲವು ನಿಯಮಗಳು ಇರುತ್ತವೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಮರ್ಥ ನಾಯಕತ್ವ ಅಗತ್ಯ
ಕೊಡಗಿನಲ್ಲಿ ಪೋಲಿಯೋ ಪತ್ತೆ
ಕನ್ನಡೇತರ ಹೆಸರುಗಳಿರುವ ಚಿತ್ರಗಳಿಗೆ ಎಳ್ಳುನೀರು
ರಾಂಚಿ:ರಾಜ್ ಠಾಕ್ರೆ ವಿರುದ್ಧ ಕೊಲೆ ಮೊಕದ್ದಮೆ
ಹೈ-ಕ ಅಭಿವೃದ್ಧಿಗೆ ಒತ್ತು: ಯಡಿಯೂರಪ್ಪ
ಆರೋಗ್ಯ ಕವಚ: ಅಬ್ದುಲ್ ಕಲಾಂ ಉದ್ಘಾಟನೆ