ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೆಪಿಎಸ್‌ಸಿ ಸಂದರ್ಶನ: ಅವ್ಯವಹಾರ ಆರೋಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಪಿಎಸ್‌ಸಿ ಸಂದರ್ಶನ: ಅವ್ಯವಹಾರ ಆರೋಪ
ಪದವಿಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಸಾಮಾನ್ಯ ಪರೀಕ್ಷೆ ನಡೆಸಿದಂತೆಯೇ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕರ ನೇಮಕಾತಿಗೂ ಪರೀಕ್ಷೆ ನಡೆಸಿ ಎಂಬ ಬೇಡಿಕೆ ನೆನೆಗುದಿಗೆ ಬಿದ್ದಿದ್ದ ಪರಿಣಾಮ ಸಂದರ್ಶನದ ಮೂಲಕವೇ ನೇಮಕಾತಿ ಮಾಡಿಕೊಳ್ಳಲು ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು, ಆದರೆ ಈ ಸಂದರ್ಶನವೇ ಅವ್ಯವಹಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅಭ್ಯರ್ಥಿಗಳು ದೂರುತ್ತಿದ್ದಾರೆ.

ಈಗಾಗಲೇ ಅರ್ಥಶಾಸ್ತ್ರದ 205,ಇತಿಹಾಸದ 180, ಸಮಾಜಶಾಸ್ತ್ರದ 184 ಹುದ್ದೆಗಳ ಭರ್ತಿಗೆ ಸಂದರ್ಶನವನ್ನೂ ಆಯೋಗ ನಡೆಸಿದೆ. ಇದೀಗ ರಾಜ್ಯಶಾಸ್ತ್ರ ವಿಷಯದ ಉಪನ್ಯಾಸಕರ ನೇಮಕಾತಿಗೆ ಸಂದರ್ಶನ ನಡೆಯುತ್ತಿದೆ.

ಆದರೆ ಸಂದರ್ಶನದಲ್ಲಿ ಪ್ರತಿಭೆಗಿಂತ ಪ್ರಭಾವ ಹಾಗೂ ಹಣಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿದೆ ಎಂಬ ಆರೋಪ ಅಭ್ಯರ್ಥಿಗಳಿಂದ ಕೇಳಿ ಬಂದಿದೆ. ಇನ್ನೂ ಕೆಲ ಅಭ್ಯರ್ಥಿಗಳು ರಾಜಕಾರಣಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳಿಂದ ಆಯೋಗದ ಸದಸ್ಯರಿಗೆ ಶಿಫಾರಸು ಮಾಡಿಸಿ ಹೆಚ್ಚಿನ ಅಂಕ ಗಿಟ್ಟಿಸಿಕೊಂಡಿದ್ದಾರೆ.

ಆದರೆ ಹಣ ಮತ್ತು ಪ್ರಭಾವದಿಂದ ಸಂದರ್ಶನದಲ್ಲಿ ಹೆಚ್ಚಿನ ಅಂಕಗಳಿಸಲು ಸಾಧ್ಯವಿಲ್ಲದ ಬಡ ಪ್ರತಿಭಾವಂತ ಅಭ್ಯರ್ಥಿಗಳ ಕನಸು ಕಮರಿ ಹೋಗುವಂತಾಗಿದೆ ಎಂದು ಪ್ರಜಾವಾಣಿಗೆ ಅಭ್ಯರ್ಥಿಗಳು ದೂರಿಕೊಂಡಿರುವುದಾಗಿ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೌದ್ದಧರ್ಮಕ್ಕೆ ಮತಾಂತರವಾಗಬೇಡಿ: ಪೇಜಾವರಶ್ರೀ
ಸಮರ್ಥ ನಾಯಕತ್ವ ಅಗತ್ಯ
ಕೊಡಗಿನಲ್ಲಿ ಪೋಲಿಯೋ ಪತ್ತೆ
ಕನ್ನಡೇತರ ಹೆಸರುಗಳಿರುವ ಚಿತ್ರಗಳಿಗೆ ಎಳ್ಳುನೀರು
ರಾಂಚಿ:ರಾಜ್ ಠಾಕ್ರೆ ವಿರುದ್ಧ ಕೊಲೆ ಮೊಕದ್ದಮೆ
ಹೈ-ಕ ಅಭಿವೃದ್ಧಿಗೆ ಒತ್ತು: ಯಡಿಯೂರಪ್ಪ