ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೆದ್ದಾರಿಯಲ್ಲಿ ಖಾಸಗಿ ಬಸ್‌‌ಗೆ ನಿಷೇಧ: ಅಶೋಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆದ್ದಾರಿಯಲ್ಲಿ ಖಾಸಗಿ ಬಸ್‌‌ಗೆ ನಿಷೇಧ: ಅಶೋಕ್
ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ಬಸ್ ಸಂಚಾರವನ್ನು ನಿರ್ಬಂಧಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿರುವ ಸಚಿವ ಆರ್.ಅಶೋಕ್, ತನ್ಮೂಲಕ ಮತ್ತೊಮ್ಮೆ ಖಾಸಗಿ ಮತ್ತು ಸರ್ಕಾರದ ನಡುವೆ ಕಾನೂನು ಸಮರ ನಡೆಯಲು ವೇದಿಕೆ ಸಿದ್ದವಾದಂತಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರ್ಕಾರಿ ಬಸ್‌ಗಳು ಮಾತ್ರ ಸಂಚರಿಸಬೇಕು ಎಂಬ ನಿಯಮ ಇದೆ.

ಈ ಹಿಂದೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸಂಚಾರ ವ್ಯವಸ್ಥೆ ಕಲ್ಪಿಸಲು ಸರ್ಕಾರ ವಿಫಲವಾಗಿತ್ತು. ಆ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಲು ಅನುಮತಿ ಪಡೆದಿದ್ದರು.

ಇದೀಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ ಒದಗಿಸಲು ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಹೈಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಲಾಗುವುದು ಎಂದರು.

ಅದೇ ರೀತಿ ಮಂಗಳೂರಿನ ನಗರ ಸಾರಿಗೆಯಲ್ಲಿ ಖಾಸಗಿಯವರ ಏಕಸ್ವಾಮ್ಯ ಮುರಿಯುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ. ಇಲ್ಲಿ ಬಿಎಂಟಿಸಿ ಮಾದರಿಯಲ್ಲಿಯೇ ನಗರ ಸಾರಿಗೆ ಸಂಚಾರವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ ನೀಲ ನಕಾಶೆ ಸಿದ್ದಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಾಸ್ತ್ರೀಯ ಸ್ಥಾನ: ಪಿಐಎಲ್‌ ವಜಾಕ್ಕೆ ರಾಜ್ಯ ಆಗ್ರಹ
ಚುನಾವಣೆ: ಕೊಡಗಿನಲ್ಲಿ ಬಿಜೆಪಿ ಜಯಭೇರಿ
ಇಂದು ಹಂಪಿ ಉತ್ಸವಕ್ಕೆ ಚಾಲನೆ
ಕೆಪಿಎಸ್‌ಸಿ ಸಂದರ್ಶನ: ಅವ್ಯವಹಾರ ಆರೋಪ
ಬೌದ್ದಧರ್ಮಕ್ಕೆ ಮತಾಂತರವಾಗಬೇಡಿ: ಪೇಜಾವರಶ್ರೀ
ಸಮರ್ಥ ನಾಯಕತ್ವ ಅಗತ್ಯ