ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಂಪಿ ಉತ್ಸವ ಅವಿಸ್ಮರಣೀಯ: ಆಡ್ವಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಂಪಿ ಉತ್ಸವ ಅವಿಸ್ಮರಣೀಯ: ಆಡ್ವಾಣಿ
14ನೇ ಹಂಪಿ ಉತ್ಸವಕ್ಕೆ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ವಿಜೃಂಭಣೆಯ ಚಾಲನೆ ದೊರೆತಿದೆ. ಲೋಕಸಭಾ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಉದ್ಘಾಟಿಸುವ ಮೂಲಕ ಅದ್ದೂರಿ ಉತ್ಸವಕ್ಕೆ ಚಾಲನೆ ನೀಡಿದರು.

ಉತ್ಸವ ಉದ್ಘಾಟಿಸಿ ಮಾತನಾಡಿದ ಅಡ್ವಾಣಿ, ತಮ್ಮ 60 ವರ್ಷದ ಸಾರ್ವಜನಿಕ ಜೀವನದಲ್ಲೇ ಇಂತಹ ವೈಭಯುತ ಉತ್ಸವ ಕಂಡಿದ್ದಿಲ್ಲ. ಇದೊಂದು ಅವಿಸ್ಮರಣೀಯ ಉತ್ಸವ ಎಂದು ಬಣ್ಣಿಸಿದರು.
NRB
ವಿಜಯನಗರದ ಸಾಮ್ರಾಜ್ಯದ ವೈಭವ, ಶ್ರೀ ಕೃಷ್ಣರಾಯನ ಧೈರ್ಯ, ಆಡಳಿತದ ಕುರಿತು ಕೇಳಿದ್ದೇ. ಆದರೆ ಇಂದು ಹಂಪಿ ವೈಭವವನ್ನು ಕಂಡಂತಾಯ್ತು. ತಮಗೆ ದೊರೆತ ವೈಭವದ ಸ್ವಾಗತವನ್ನು ಎಂದೆಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಂದಿನ ವರ್ಷ ಶ್ರೀ ಕೃಷ್ಣದೇವರಾಯನ ಆಳ್ವಿಕೆಗೆ 500 ವರ್ಷ ಕಳೆಯಲಿದ್ದು, ಇದರಂಗವಾಗಿ ವಿಶೇಷ ಸಮಿತಿಯನ್ನು ರಚಿಸಿ ಮತ್ತೊಂದು ಅದ್ದೂರಿ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅನಂತ್ ಕುಮಾರ್, ವಿ.ಎಸ್. ಆಚಾರ್ಯ, ಸಚಿವರಾದ ಜನಾರ್ಧನ ರೆಡ್ಡಿ, ಶ್ರೀರಾಮುಲು, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಳ್ಳಾರಿ: ವಿದ್ಯುತ್ ಸ್ವಾವಲಂಬನೆಗೆ ಆಡ್ವಾಣಿ ಸಲಹೆ
ಹಾಲಿನ ದರ ಏರಿಕೆ ಇಲ್ಲ: ಸವದಿ
ಚುನಾವಣೆ: ಸೋಲು ನೋವು ತಂದಿದೆ-ದೇಶಪಾಂಡೆ
ರಾಷ್ಟ್ರೀಯ ಭಾಷಾ ನೀತಿ ಜಾರಿಗೆ ಬರಗೂರು ಆಗ್ರಹ
ಮಂಗಳೂರು: ಭೀಕರ ಅಪಘಾತಕ್ಕೆ 5 ಬಲಿ
ನ.10ರಂದು ಕುಮಾರಸ್ವಾಮಿ ಅಧಿಕಾರ ಸ್ವೀಕಾರ