ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೆಪಿಸಿಸಿ ಪಟ್ಟ ತಪ್ಪಲು ಲಿಂಗಾಯಿತರೇ ಕಾರಣ: ಸೋಮಣ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಪಿಸಿಸಿ ಪಟ್ಟ ತಪ್ಪಲು ಲಿಂಗಾಯಿತರೇ ಕಾರಣ: ಸೋಮಣ್ಣ
NRB
ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದ ಶಾಸಕ ವಿ. ಸೋಮಣ್ಣ ಇದೀಗ ಮತ್ತೊಮ್ಮೆ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್‌‌ನಲ್ಲಿರುವ ಐದಾರು ಮಂದಿ ವೀರಶೈವ ಸಮಾಜದ ನಾಯಕರಿಂದಾಗಿಯೇ ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿತು ಎಂದು ಅವರು ಆಪಾದಿಸಿದ್ದಾರೆ.

ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾದ ಆರ್. ವಿ.ದೇಶಪಾಂಡೆ, ಕಾರ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಷ್ಟೇ ಸಾಮರ್ಥ್ಯ ತಮಗೂ ಇದೆ. ಈಗಲೂ ಜವಾಬ್ದಾರಿಯ ಅವಕಾಶ ಕೊಟ್ಟರೆ ಸಂಘಟನೆಯ ಹೊಣೆ ಹೊರಲು ಸಿದ್ಧ ಎಂದು ಹೇಳಿದ್ದಾರೆ.

ಆದರೆ ತಮ್ಮ ಸಮಾಜದವರೇ ತಮಗೆ ಅಧ್ಯಕ್ಷ ಸ್ಥಾನ ದೊರಕದಂತೆ ಮಾಡಿದರು. ಈ ನಾಯಕರೆಲ್ಲಾ ಹೈಕಮಾಂಡ್‌‌‌ಗೆ ತಮ್ಮ ಬಗ್ಗೆ ಹೇಳಿಕೊಳ್ಳುತ್ತಿದ್ದರೆ ಹೊರತು, ಇತರರ ಬಗ್ಗೆ ತಿಳಿಸುತ್ತಿರಲಿಲ್ಲ. ಬೇರೆಯವರನ್ನು ಬೆಳಸಲಿಲ್ಲ ಎಂದು ಗಂಭೀರವಾಗಿ ದೂರಿದ್ದಾರೆ.

ಏನೇ ಆಗಲಿ ಕೆಪಿಸಿಸಿ ಅಧ್ಯಕ್ಷ ಗಾದಿ ಮುಗಿದ ಅಧ್ಯಾಯ. ಈ ಕುರಿತು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ತನ್ನಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಿತ್ತು. ಕೊನೆ ಕ್ಷಣದಲ್ಲಿ ಅಧ್ಯಕ್ಷ ಸ್ಥಾನ ನೀಡದಿರುವ ಬಗ್ಗೆ ತಮಗೂ ಬೇಸರವಿದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಂಪಿ ಉತ್ಸವ ಅವಿಸ್ಮರಣೀಯ: ಆಡ್ವಾಣಿ
ಬಳ್ಳಾರಿ: ವಿದ್ಯುತ್ ಸ್ವಾವಲಂಬನೆಗೆ ಆಡ್ವಾಣಿ ಸಲಹೆ
ಹಾಲಿನ ದರ ಏರಿಕೆ ಇಲ್ಲ: ಸವದಿ
ಚುನಾವಣೆ: ಸೋಲು ನೋವು ತಂದಿದೆ-ದೇಶಪಾಂಡೆ
ರಾಷ್ಟ್ರೀಯ ಭಾಷಾ ನೀತಿ ಜಾರಿಗೆ ಬರಗೂರು ಆಗ್ರಹ
ಮಂಗಳೂರು: ಭೀಕರ ಅಪಘಾತಕ್ಕೆ 5 ಬಲಿ