ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲೋಕಾಯುಕ್ತ ತನಿಖೆಗೆ ಸಿದ್ದ: ರೇವಣ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಾಯುಕ್ತ ತನಿಖೆಗೆ ಸಿದ್ದ: ರೇವಣ್ಣ
ಕಳೆದ ಸಮ್ಮಿಶ್ರ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿನ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಕುರಿತು ಲೋಕಾಯುಕ್ತ ತನಿಖೆ ಎದುರಿಸಲು ನಾನು ಸಿದ್ದ ಎಂದು ಕೆಎಂಎಫ್ ಅಧ್ಯಕ್ಷ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ನಾನು ಲೋಕೋಪಯೋಗಿ ಸಚಿವನಾಗಿದ್ದ ವೇಳೆ 500 ಎಂಜಿನಿಯರ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಗೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಉಪ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ನೇಮಕಾತಿಗೆ ಅನುಮೋದನೆ ನೀಡಿದ್ದಾರೆ.

ಅವರು ಅನುಮೋದನೆ ನೀಡದಿದ್ದರೆ ನೇಮಕಾತಿಯೇ ಆಗುತ್ತಿರಲಿಲ್ಲ, ಈಗ ತನಿಖೆಯ ಅಗತ್ಯವೂ ಇರಲಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ನೇಮಕಾತಿಗೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಯಿದ್ದರೆ, ಹಿಂದಿನ ಸರ್ಕಾರದ ಅವಧಿಯಲ್ಲೇ ಪ್ರಸ್ತಾಪಿಸಬೇಕಿತ್ತು. ಸರ್ಕಾರದಲ್ಲಿ ಬಿಜೆಪಿ ಸಚಿವರಾದರೂ ಇದನ್ನು ಪ್ರಶ್ನಿಸಬೇಕಿತ್ತು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಈಶ್ವರಪ್ಪ ಜತೆ ಜೆಡಿಎಸ್ ಮುಖಂಡರ ಮಾತುಕತೆ !
ಕಾಂಗ್ರೆಸ್‌ಗೆ ಭ್ರಮನಿರಸನ: ಬಿಜೆಪಿ
ರಾಜ್ ಸ್ಮಾರಕಕ್ಕೆ 8 ಕೋಟಿ: ಕರಂದ್ಲಾಜೆ
ಕೆಎಸ್‌‌ಡಿಎಲ್ ಸ್ಥಳಾಂತರಕ್ಕೆ ಸರ್ಕಾರದ ಚಿಂತನೆ
ನಕ್ಸಲೀಯರ ಜತೆ ಬಿಜೆಪಿ ಮುಖಂಡರ ಚರ್ಚೆ!
ಹಾಲಿನ ದರ ಏರಿಕೆ ಅನಿವಾರ್ಯ: ರೇವಣ್ಣ