ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸ್ವರ ಸಾಮ್ರಾಟನಿಗೆ ಅಭಿನಂದನೆಗಳ ಮಹಾಪೂರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ವರ ಸಾಮ್ರಾಟನಿಗೆ ಅಭಿನಂದನೆಗಳ ಮಹಾಪೂರ
ಪ್ರಖ್ಯಾತ ಹಿಂದೂಸ್ಥಾನಿ ಸಂಗೀತ ದಿಗ್ಗಜ ಪಂಡಿತ್ ಭೀಮ್‌‌‌ಸೇನ್ ಜೋಷಿ ಅವರಿಗೆ ದೇಶದ ಅತ್ಯುನ್ನತ ಪೌರ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಿರುವ ಬೆನ್ನಲ್ಲೆ ಸಂಗೀತ ಕ್ಷೇತ್ರದಲ್ಲಿ ಗೌರಿಶಂಕರದಷ್ಟು ಎತ್ತರಕ್ಕೆ ಬೆಳದಿರುವ ಭೀಮಸೇನ್ ಜೋಷಿ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ಕರ್ನಾಟಕಕ್ಕೆ ಮತ್ತೊಂದು ಗರಿ ಮೂಡಿಸಿದಂತಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಾ. ಗಂಗೂಬಾಯಿ ಹಾನಗಲ್. ನಾವಿಬ್ಬರೂ ಒಂದೇ ಗುರುವಿನಲ್ಲಿ ಒಟ್ಟಿಗೆ ಸಂಗೀತ ಕಲಿತಿದ್ದರಿಂದ ಪ್ರಶಸ್ತಿ ಪಡೆದಿರುವ ಬಗ್ಗೆ ಹೆಮ್ಮೆ ಎನಿಸುತ್ತದೆ. ಕರ್ನಾಟಕದವರಿಗೆ ಈ ಪ್ರಶಸ್ತಿ ಬಂದಿರುವುದು ನಿಜಕ್ಕೂ ಖುಷಿ ತಂದಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೋಲಿನ ಪರಾಮರ್ಶೆ: ಕಾಂಗ್ರೆಸ್ ಸಭೆ
ಲೋಕಾಯುಕ್ತ ತನಿಖೆಗೆ ಸಿದ್ದ: ರೇವಣ್ಣ
ಈಶ್ವರಪ್ಪ ಜತೆ ಜೆಡಿಎಸ್ ಮುಖಂಡರ ಮಾತುಕತೆ !
ಕಾಂಗ್ರೆಸ್‌ಗೆ ಭ್ರಮನಿರಸನ: ಬಿಜೆಪಿ
ರಾಜ್ ಸ್ಮಾರಕಕ್ಕೆ 8 ಕೋಟಿ: ಕರಂದ್ಲಾಜೆ
ಕೆಎಸ್‌‌ಡಿಎಲ್ ಸ್ಥಳಾಂತರಕ್ಕೆ ಸರ್ಕಾರದ ಚಿಂತನೆ