ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರೇವಣ್ಣ ವಿರುದ್ಧ ತನಿಖೆಗೆ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೇವಣ್ಣ ವಿರುದ್ಧ ತನಿಖೆಗೆ ಆದೇಶ
ಕಳೆದ ಸಮ್ಮಿಶ್ರ ಸರ್ಕಾರದ ಅವಧಿ ಸಂದರ್ಭದಲ್ಲಿ ಹೆಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಾಗ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಲೋಕಾಯುಕ್ತ ತನಿಖೆಗೆ ಆದೇಶಿಸಿ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.

ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ 703 ಎಂಜಿನಿಯರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗಿತ್ತು.

ಈ ನೇಮಕಾತಿ ಸಂದರ್ಭದಲ್ಲಿ ನಿರ್ದಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಂಡಿರುವ ಉದ್ದೇಶದಿಂದ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿ ಸ್ವಜನ ಪಕ್ಷಪಾತ,ಭ್ರಷ್ಟಾಚಾರ ನಡೆಸಲಾಗಿದೆ ಎಂಬ ವ್ಯಾಪಕ ದೂರುಗಳು ಸರ್ಕಾರಕ್ಕೆ ಬಂದಿದ್ದವು.

ಈ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ 1984ರ ಲೋಕಾಯುಕ್ತ ಕಾಯಿದೆ 7(2)ಯಡಿ ಎಂಜಿನಿಯರ್ ನೇಮಕಾತಿ ಅಕ್ರಮಗಳ ಬಗ್ಗೆ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿ ಅಧಿಸೂಚನೆ ಹೊರಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಸಭೆಗೆ ಸಿದ್ದು ಗೈರು
ಜೆಡಿಎಸ್ ಏಕಾಂಗಿ ಹೋರಾಟ: ಕುಮಾರಸ್ವಾಮಿ
ಜ.29 ರಿಂದ 75ನೇ ಸಾಹಿತ್ಯ ಸಮ್ಮೇಳನ
ಪೊಲೀಸರಿಗೆ ಶರಣಾಗಲಾರೆ: ನಕ್ಸಲ್ ಮುಖಂಡ ಬಿಜಿಕೆ
ಪಂಚಾಯ್ತಿಗಳಿಗೆ ಉಸ್ತುವಾರಿ ಸಮಿತಿ: ಉಗ್ರಪ್ಪ ಕಿಡಿ
ಕಾಂಗ್ರೆಸ್ ಕ್ಷಮೆಗೆ ಯಡಿಯೂರಪ್ಪ ಪಟ್ಟು