ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅದ್ದೂರಿಯ ಹಂಪಿ ಉತ್ಸವಕ್ಕೆ ತೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅದ್ದೂರಿಯ ಹಂಪಿ ಉತ್ಸವಕ್ಕೆ ತೆರೆ
ವಿಶ್ವವಿಖ್ಯಾತ ಹಂಪಿ ಉತ್ಸವ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ,ಬುಧವಾರ ಅಧಿಕೃತವಾಗಿ ತೆರೆ ಎಳೆಯಲಾಯಿತು.

ಪ್ರತಿದಿನ ಕನಿಷ್ಠ 3ಲಕ್ಷ ಜನ ಹಂಪಿ ಐತಿಹಾಸಿಕ ಉತ್ಸವನ್ನು ವೀಕ್ಷಿಸಿದ್ದು, ಕೊನೆಯ ದಿನವಾದ ಬುಧವಾರ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಸುಮಾರು ಹತ್ತು ಸಾವಿರಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಭೇಟಿ ನೀಡಿರುವುದು ವಿಶೇಷವಾಗಿತ್ತು.

NRB
ಈವರೆಗೆ ನಡೆದ ಉತ್ಸವಗಳಲ್ಲಿ ಸುಮಾರು ಆರು ಲಕ್ಷದವರೆಗೆ ಜನರು ಬಂದು ಹೋಗುತ್ತಿದ್ದರು. ಈ ಬಾರಿ ಆ ಸಂಖ್ಯೆ ದ್ವಿಗುಣಗೊಂಡಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ 5ಕೋಟಿ ರೂ.ಬಜೆಟ್‌ನಲ್ಲಿ ಭಾರೀ ಏರ್ಪಾಡುಗಳನ್ನು ಮಾಡಿದ್ದು ಮತ್ತೊಂದು ಕಾರಣ.

ಆದರೆ ಯೋಜಿತವಾಗಿಯೇ ನಡೆದ ಉತ್ಸವದಲ್ಲಿ ಸಂಚಾರ ವ್ಯವಸ್ಥೆ ವೈಫಲ್ಯ ಎದ್ದು ಕಂಡಿತು. ಭಾರೀ ಸಂಖ್ಯೆಯಲ್ಲಿ ಬಂದ ಜನರನ್ನು ನಿಯಂತ್ರಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಕೈಗೊಳ್ಳಲು ಪೊಲೀಸರು ಪ್ರಯಾಸಪಡಬೇಕಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಡಿಎಸ್ ಜತೆ ಮೈತ್ರಿ: ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ
ರೇವಣ್ಣ ವಿರುದ್ಧ ತನಿಖೆಗೆ ಆದೇಶ
ಕಾಂಗ್ರೆಸ್ ಸಭೆಗೆ ಸಿದ್ದು ಗೈರು
ಜೆಡಿಎಸ್ ಏಕಾಂಗಿ ಹೋರಾಟ: ಕುಮಾರಸ್ವಾಮಿ
ಜ.29 ರಿಂದ 75ನೇ ಸಾಹಿತ್ಯ ಸಮ್ಮೇಳನ
ಪೊಲೀಸರಿಗೆ ಶರಣಾಗಲಾರೆ: ನಕ್ಸಲ್ ಮುಖಂಡ ಬಿಜಿಕೆ