ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಣಿ ಅವ್ಯವಹಾರ ಕುರಿತು ಶೀಘ್ರ ವರದಿ: ಹೆಗ್ಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿ ಅವ್ಯವಹಾರ ಕುರಿತು ಶೀಘ್ರ ವರದಿ: ಹೆಗ್ಡೆ
ಹಿಂದಿನ ಸರ್ಕಾರದ ಆದೇಶದಂತೆ 2000ನೇ ಸಾಲಿನಿಂದ 2008ರವರೆಗೆ ನಡೆದಿರುವ ಗಣಿಗಾರಿಕೆ ಅವ್ಯವಹಾರಗಳ ಕುರಿತು ಈವರೆಗೆ ನಡೆದಿರುವ ತನಿಖೆಯ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆದಿರುವ ಗಣಿಗಾರಿಕೆ ಅವ್ಯವಹಾರಗಳ ಬಗ್ಗೆ ವರದಿಯ ಮೊದಲ ಭಾಗದಲ್ಲಿ ವಿಸ್ತ್ರತವಾಗಿ ವಿವರಿಸಲಾಗಿದೆ. ಇಲ್ಲಿ ತನಿಖೆಯ ವಿವಿಧ ಹಂತಗಳಲ್ಲೂ ಉಲ್ಲೇಖಿಸ ಲಾಗಿದೆ. ಗಣಿಗಾರಿಕೆ ಅವ್ಯವಹಾರದ ಸಂಪೂರ್ಣ ಚಿತ್ರಣವನ್ನು ನೀಡುವಂತೆ ವರದಿ ತಯಾರಿಸಲಾಗಿದೆ ಎಂದು ಹೇಳಿದರು.

ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ನಡೆಸಿ ಅಕ್ರಮವಾಗಿ ಅದಿರು ಸಾಗಣೆ ಮಾಡಿರುವುದು ಮತ್ತು ಮೈಸೂರು ಮಿನರಲ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ಹೆಸರುಗಳು ವರದಿಯಲ್ಲಿವೆ ಎಂದರು.

ಇಡೀ ವರದಿಯಲ್ಲಿ ನನ್ನ ಅಥವಾ ಸಂಸ್ಥೆಯ ಅಧಿಕಾರಿಗಳ ಸ್ವಂತ ಅಭಿಪ್ರಾಯಕ್ಕೆ ಅವಕಾಶ ನೀಡಿಲ್ಲ. ದಾಖಲೆಗಳಲ್ಲಿ ಲಭ್ಯವಾದ ಮಾಹಿತಿ ಮತ್ತು ನಾನು ಗಣಿ ಪ್ರದೇಶಗಳಿಗೆ ಭೇಟಿ ನೀಡಿದಾಗ ನೇರವಾಗಿ ಕಂಡದ್ದನ್ನು ದಾಖಲಿಸಿದ್ದೇನೆ. ನಾನು ಯಾವುದೇ ವೈಯಕ್ತಿಕ ಹಿತಾಸಕ್ತಿಯ ವರದಿಯಲ್ಲಿ ದಾಖಲಾಗಿಲ್ಲ ಎಂದು ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅದ್ದೂರಿಯ ಹಂಪಿ ಉತ್ಸವಕ್ಕೆ ತೆರೆ
ಜೆಡಿಎಸ್ ಜತೆ ಮೈತ್ರಿ: ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ
ರೇವಣ್ಣ ವಿರುದ್ಧ ತನಿಖೆಗೆ ಆದೇಶ
ಕಾಂಗ್ರೆಸ್ ಸಭೆಗೆ ಸಿದ್ದು ಗೈರು
ಜೆಡಿಎಸ್ ಏಕಾಂಗಿ ಹೋರಾಟ: ಕುಮಾರಸ್ವಾಮಿ
ಜ.29 ರಿಂದ 75ನೇ ಸಾಹಿತ್ಯ ಸಮ್ಮೇಳನ