ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಕೈ' ಆತ್ಮಾವಲೋಕನ ಸಭೆಯಲ್ಲಿ ರಂಪಾಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಕೈ' ಆತ್ಮಾವಲೋಕನ ಸಭೆಯಲ್ಲಿ ರಂಪಾಟ
ಕಳೆದ ವಿಧಾನಸಭಾ ಚುನಾವಣೆ ಫಲಿತಾಂದ ಆತ್ಮಾವಲೋಕನ ಮಾಡಿಕೊಳ್ಳುವ ಕುರಿತಂತೆ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮುಖಂಡರ ನಡುವೆ ವಾಗ್ವಾದ, ಮಾತಿನ ಚಕಮಕಿಗಳು ನಡೆದಿದ್ದು, ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಮತ್ತೆ ಭುಗಿಲೆದ್ದಿವೆ.

ವಿಧಾನಸಭಾ ಉಪಚುನಾವಣೆಯಲ್ಲಿ ಪರಾಭವಗೊಳ್ಳಲು ಕಾರಣವಾದ ಅಂಶಗಳ ಬಗ್ಗೆ ಕೆಲವು ಜಿಲ್ಲೆಗಳ ಮುಖಂಡರು ನೇರವಾಗಿ ನಾಯಕರು ಹಾಗೂ ಸ್ಥಳೀಯ ನಾಯಕರ ಹೆಸರು ಹೇಳಿದ್ದು ಸಭೆಯಲ್ಲಿ ಕೆಲಕಾಲ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು.

ಪಕ್ಷದ ಅಭ್ಯರ್ಥಿಗಳ ಸೋಲಿಗೆ ಪ್ರಭಾವಿ ಮುಖಂಡರು ಪ್ರಚಾರದಲ್ಲಿ ಭಾಗವಹಿಸದೇ ಇರುವುದು, ಸ್ಥಳೀಯರ ಅಭಿಪ್ರಾಯ. ಮತದಾರರ ಒಲವುಗಳನ್ನು ಸರಿಯಾಗಿ ಅಂದಾಜಿಸದೆ ಮೇಲಿನಿಂದ ಅಭ್ಯರ್ಥಿಗಳನ್ನು ಹೇರಿದ್ದು, ಯಾವುದೇ ಒಬ್ಬ ನಾಯಕನನ್ನು ಬಿಂಬಿಸದೆ ನಾಲ್ಕೈದು ಜನರನ್ನು ಬಿಂಬಿಸುವ ಪ್ರಯತ್ನ ಮಾಡಿದ್ದು ಸೋಲಿಗೆ ಪ್ರಮುಖ ಕಾರಣ ಎಂದು ಜಿಲ್ಲೆಗಳ ಅಧ್ಯಕ್ಷರು ಆರೋಪಿಸಿದ್ದರು.

ಪಕ್ಷದ ನಾಯಕರ ನಡುವೆಯೇ ಇರುವ ಭಿನ್ನಾಭಿಪ್ರಾಯಗಳು ಪಕ್ಷದ ಸೋಲಿಗೆ ಪ್ರಮುಖ ಕಾರಣವೆಂದು ಸಭೆಯಲ್ಲಿ ಅನೇಕರ ಅಭಿಪ್ರಾಯವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅವರು ಬರುವುದನ್ನು ಒಂದು ಗುಂಪು ವಿರೋಧಿಸಿದ್ದು, ಮುಖ್ಯಮಂತ್ರಿ ಅಭ್ಯರ್ಥಿಯೆಂದು ಯಾರನ್ನು ಘೋಷಣೆ ಮಾಡದೇ ಇದ್ದದ್ದು ಸಹ ಸೋಲಿನ ಕಾರಣಗಳಲ್ಲಿ ಒಂದಾಗಿದೆ ಎಂಬುದು ಸಭೆಯಲ್ಲಿ ಹಲವರ ಅಭಿಮತವಾಗಿತ್ತು. ಈ ಬಗ್ಗೆ ಅನೇಕ ಹಿರಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿರುವುದು ವಾಗ್ವಾದಕ್ಕೆ ಕಾರಣವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಣಿ ಅವ್ಯವಹಾರ ಕುರಿತು ಶೀಘ್ರ ವರದಿ: ಹೆಗ್ಡೆ
ಅದ್ದೂರಿಯ ಹಂಪಿ ಉತ್ಸವಕ್ಕೆ ತೆರೆ
ಜೆಡಿಎಸ್ ಜತೆ ಮೈತ್ರಿ: ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ
ರೇವಣ್ಣ ವಿರುದ್ಧ ತನಿಖೆಗೆ ಆದೇಶ
ಕಾಂಗ್ರೆಸ್ ಸಭೆಗೆ ಸಿದ್ದು ಗೈರು
ಜೆಡಿಎಸ್ ಏಕಾಂಗಿ ಹೋರಾಟ: ಕುಮಾರಸ್ವಾಮಿ