ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶ್ರೀರಾಮನ ಮೇಲೆ ಆಣೆ ಮಾಡಿ: ಕುಮಾರಸ್ವಾಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀರಾಮನ ಮೇಲೆ ಆಣೆ ಮಾಡಿ: ಕುಮಾರಸ್ವಾಮಿ
ಬೆಂಗಳೂರು: ಹಣ,ಆಮೀಷ ಒಡ್ಡಿ ಪಕ್ಷಕ್ಕೆ ಯಾರನ್ನೂ ಸೇರಿಸಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶ್ರೀರಾಮನ ಮೇಲೆ ಆಣೆ (ಪ್ರಮಾಣ) ಮಾಡಿ ಉತ್ತರ ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಆಪರೇಷನ್ ಕಮಲದ ಮೂಲಕ ಜನಪ್ರತಿನಿಧಿಗಳನ್ನು ಬಿಜೆಪಿಗೆ ಸೇರಿಸಿಕೊಳ್ಳುವಾಗ ಅವರಿಗೆ ಹಣ ಕೊಟ್ಟಿಲ್ಲ ಮತ್ತು ವಿಧಾನಪರಿಷತ್ ಚುನಾವಣೆ ವೇಳೆ ಹಣ ನೀಡಿಲ್ಲ ಎಂದು ಮುಖ್ಯಮಂತ್ರಿಗಳು ಶ್ರೀರಾಮನ ಮೇಲೆ ಪ್ರಮಾಣ ಮಾಡಿದಲ್ಲಿ ನಾನು ಸಾರ್ವಜನಿಕವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ ಅವರು, ಶ್ರೀರಾಮನ ಮೇಲೆ ಭಕ್ತಿ, ನಂಬಿಕೆ ಇದ್ದರೆ ಅವರು ಆಣೆ ಮಾಡಿ ಹೇಳಲು ಸಿದ್ದರಿದ್ದಾರೆಯೇ ಎಂದು ಪ್ರಶ್ನಿಸಿದರು.

ಖರೀದಿ ರಾಜಕೀಯದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಕೈ' ಆತ್ಮಾವಲೋಕನ ಸಭೆಯಲ್ಲಿ ರಂಪಾಟ
ಗಣಿ ಅವ್ಯವಹಾರ ಕುರಿತು ಶೀಘ್ರ ವರದಿ: ಹೆಗ್ಡೆ
ಅದ್ದೂರಿಯ ಹಂಪಿ ಉತ್ಸವಕ್ಕೆ ತೆರೆ
ಜೆಡಿಎಸ್ ಜತೆ ಮೈತ್ರಿ: ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ
ರೇವಣ್ಣ ವಿರುದ್ಧ ತನಿಖೆಗೆ ಆದೇಶ
ಕಾಂಗ್ರೆಸ್ ಸಭೆಗೆ ಸಿದ್ದು ಗೈರು