ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೊಗೇನಕಲ್: ಟೆಂಡರ್ ರದ್ದತಿಗೆ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೇನಕಲ್: ಟೆಂಡರ್ ರದ್ದತಿಗೆ ಆಗ್ರಹ
ಹೊಗೇನಕಲ್ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಕರೆದಿರುವ ಟೆಂಡರ್ ಗಳನ್ನು ತಕ್ಷಣವೇ ರದ್ದುಪಡಿಸಿ ಉಭಯ ರಾಜ್ಯಗಳ ಸಭೆ ಕರೆಯಬೇಕೆಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಪತ್ರ ನೀಡಿರುವ ಸಚಿವರು, ಟೆಂಡರ್ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿಯಾಗಿ ವಾಸ್ತವ ಸ್ಥಿತಿಗತಿಗಳನ್ನು ಬೊಮ್ಮಾಯಿ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕರ್ನಾಟಕಕ್ಕೆ ನ್ಯಾಯ ಕಲ್ಪಿಸಬೇಕೆಂದು ಸಚಿವರು ಕೋರಿದ್ದಾರೆ ಎನ್ನಲಾಗಿದೆ.

ರಾಜ್ಯದ ಹಿತಕ್ಕೆ ಧಕ್ಕೆ ಉಂಟಾದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಯಾವುದೇ ಕಾರಣದಿಂದಲೂ ಈ ವಿಷಯದಲ್ಲಿ ಮೃಧು ಧೋರಣೆ ತಳೆಯಬಾರದು ಎಂದು ಅವರು ತಿಳಿಸಿದ್ದಾರೆ.

ಉಭಯ ರಾಜ್ಯಗಳ ನಡುವೆ ಹೊಗೇನಕಲ್ ಯೋಜನೆ ಕುರಿತು ಉಂಟಾಗಿರುವ ವಿವಾದದ ಬಗ್ಗೆ ಸಭೆ ಕರೆಯುವಂತೆ ತಾವು ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದರೂ, ಇದುವರೆಗೆ ಸಭೆ ಕರೆದಿಲ್ಲ ಎಂದು ಪತ್ರದಲ್ಲಿ ಅವರು ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಧಾರವಾಡ: ಭೀಕರ ಅಪಘಾತಕ್ಕೆ 5 ಬಲಿ
ಶ್ರೀರಾಮನ ಮೇಲೆ ಆಣೆ ಮಾಡಿ: ಕುಮಾರಸ್ವಾಮಿ
'ಕೈ' ಆತ್ಮಾವಲೋಕನ ಸಭೆಯಲ್ಲಿ ರಂಪಾಟ
ಗಣಿ ಅವ್ಯವಹಾರ ಕುರಿತು ಶೀಘ್ರ ವರದಿ: ಹೆಗ್ಡೆ
ಅದ್ದೂರಿಯ ಹಂಪಿ ಉತ್ಸವಕ್ಕೆ ತೆರೆ
ಜೆಡಿಎಸ್ ಜತೆ ಮೈತ್ರಿ: ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ