ನವೆಂಬರ್ 14ರಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ “ಬೆಂಗಳೂರು ಪುಸ್ತಕ ಮೇಳ”ದ ಆರನೆಯ ಆವೃತ್ತಿ ಅನಾವರಣಗೊಳ್ಳಲಿದೆ.
“ಬೆಂಗಳೂರು ಪುಸ್ತಕ ಮೇಳ 2008”ರಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಪ್ರದರ್ಶನಗೊಳ್ಳುತ್ತಿದ್ದು ಎರಡು ಲಕ್ಷಕ್ಕೂ ಹೆಚ್ಚಿನ ಜನರನ್ನು 300ಕ್ಕೂ ಹೆಚ್ಚು ಅಂಗಡಿಗಳು, ಪ್ರಶ್ನಾವಳಿಗಳು ಹಾಗೂ ಬಹುಭಾಷಾ ಪುಸ್ತಕಗಳು ಆಕರ್ಷಿಸಲಿವೆ.
ಈ ವಾರ್ಷಿಕ ಪುಸ್ತಕ ಮೇಳ ಸುಮಾರು 15 ಕೋಟಿ ರೂಪಾಯಿಗಳ ವಹಿವಾಟು ನಡೆಸಲಿದೆ. ಮುಖ್ಯಮಂತ್ರಿ ಬಿ.ಎಸ್ ಯೆಡಿಯೂರಪ್ಪ ಈ 10-ದಿನಗಳ ಮೇಳವನ್ನು ಉದ್ಘಾಟಿಸುವ ನಿರೀಕ್ಷೆಯಿದೆ.
ಬೆಂಗಳೂರು ಪುಸ್ತಕ ಮೇಳದ ಕಾರ್ಯವಾಹಕ ನಿರ್ದೇಶಕರಾದ ಬಿ. ಎಸ್. ರಘುರಾಮ್ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಜೊತೆ ಅಂಗಡಿಗಳು ಹಿಂದಿ, ತಮಿಳು, ಮಲಯಾಳಂ, ತೆಲಗು ಹಾಗೂ ಬಂಗಾಳಿ ಪುಸ್ತಕಗಳನ್ನೂ ಹೊಂದಿರುತ್ತವೆ ಎಂದು ತಿಳಿಸಿದರು.
ಬೆಂಗಳೂರು ಪುಸ್ತಕ ಮೇಳ ದೇಶದ ಪ್ರಕಾಶನ ಉದ್ಯಮದಲ್ಲಿ ಎಲ್ಲಕ್ಕಿಂತ ಹೆಚ್ಚು ಚರ್ಚೆಗೊಳಗಾಗುವ ಕಾರ್ಯಕ್ರಮವನ್ನಾಗಿ ಮಾಡಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆಂದು ಅವರು ತಿಳಿಸಿದರು.
75,000 ಚದರ ಅಡಿಗೂ ಹೆಚ್ಚು ಜಾಗದಲ್ಲಿ ಜರುಗುವ ಈ ಕಾರ್ಯಕ್ರಮವನ್ನು ಬೆಂಗಳೂರು ಪುಸ್ತಕ ಮಾರಾಟಗಾರರ ಹಾಗೂ ಪ್ರಕಾಶಕರ ಸಂಘ ಮತ್ತು ಕ್ಲಬ್ ಕ್ಲಾಸ್ನವರು ಆಯೋಜಿಸುತ್ತಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯವರು ಮೇಳಕ್ಕೆ ಹಣಕಾಸು ನೆರವು ನೀಡುತ್ತಿದ್ದಾರೆ.
ಈ ವಾರ್ಷಿಕ ಕಾರ್ಯಕ್ರಮಕ್ಕೆ ಚಲನಚಿತ್ರರಂಗ ಹಾಗೂ ಕಾರ್ಪೋರೇಟ್ ಜಗತ್ತಿನ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲೂ ಆಯೋಜಕರು ನಿರ್ಧರಿಸಿದ್ದಾರೆ. ಮೇಳಕ್ಕೆ ಭೇಟಿ ನೀಡುವ ಗ್ರಾಹಕರಿಗೆ ಪ್ರತಿ ಪುಸ್ತಕದಂಗಡಿಯೂ ಪ್ರತೀ ದಿನ ರೂ. 50,000ಗಳಷ್ಟು ಮೊತ್ತದ ಪುಸ್ತಕ ಮಾರಾಟ ಮಾಡುವ ನಿರೀಕ್ಷೆಯಿದೆ.
ಈ 10-ದಿನಗಳ ಮೇಳದಲ್ಲಿ ಈ ಅಂಗಡಿಗಳು ಅನೇಕ ಕಾಲೇಜುಗಳ ಗ್ರಂಥಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಸಗಟು ಮಾರಾಟ ಮಾಡುವ ನಿರೀಕ್ಷೆಯೂ ಇದೆ. ಶ್ರೀ ರಘುರಾಮ್ ಅವರ ಪ್ರಕಾರ, ಬಹಳಷ್ಟು ಪ್ರಕಾಶಕರು ಸಂಸ್ಥೆಗಳಿಂದ ಸಗಟು ಖರೀದಿಯ ಆರ್ಡರ್ಗಳನ್ನು ಪಡೆಯುತ್ತಿದ್ದು ನಮಗೆ ಸಾಮಾನ್ಯವಾಗಿ ಇಂಥ ಮಾರಾಟಗಳ ಲೆಕ್ಕ ಸಿಗುವದಿಲ್ಲ ಎಂದು ತಿಳಿಸಿದ್ದಾರೆ. |