ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೆಎಂಎಫ್- ಸರ್ಕಾರದ ನಡುವೆ ಜಟಾಪಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಎಂಎಫ್- ಸರ್ಕಾರದ ನಡುವೆ ಜಟಾಪಟಿ
ಹಾಲಿನ ದರದ ಕುರಿತಾದ ಕೆಎಂಎಫ್ ಮತ್ತು ಸರ್ಕಾರದ ನಡುವಿನ ತಿಕ್ಕಾಟ ಇದೀಗ ಮತ್ತೊಂದು ರೂಪ ಪಡೆದುಕೊಂಡಿದೆ. ಮತ್ತೊಮ್ಮೆ ಲೆಕ್ಕ ಪರಿಶೋಧನೆ ನಡೆಸಲು 21 ಮಂದಿ ಅಧಿಕಾರಿಗಳಿರುವ ದೊಡ್ಡ ತಂಡವನ್ನೇ ಸರ್ಕಾರ ಕೆಎಂಎಫ್ ಗೆ ಕಳುಹಿಸಿದೆ.

ಈ ಸಂಬಂಧ ಗುರುವಾರ ಲೆಕ್ಕ ಪರಿಶೋಧನೆ ನಡೆಸುತ್ತಿರುವ ಸಹಕಾರ ಇಲಾಖೆಯ ಅಧಿಕಾರಿಗಳು ವ್ಯಾಪಕ ತಪಾಸಣೆ ನಡೆಸಿದ್ದರು.

ಹಾಲಿನ ದರ ನಿಗದಿ ಕುರಿತಂತೆ ಕಳೆದ ಕೆಲವು ತಿಂಗಳುಗಳಿಂದ ಸರ್ಕಾರ ಹಾಗೂ ಕೆಎಂಎಫ್ ನಡುವಿನ ಜಟಾಪಟಿ ನಡೆಯುತ್ತಿದೆ. ಇದರ ಬೆನ್ನಲ್ಲೆ ದೇವೇಗೌಡರ ಕುಟುಂಬ ಹಾಗೂ ಕೆಎಂಎಫ್ ಅಧ್ಯಕ್ಷ ರೇವಣ್ಣ ವಿರುದ್ಧ ಹಗೆ ತೀರಿಸಿಕೊಳ್ಳಲು ಸರ್ಕಾರ ಈ ರೀತಿ ನಡೆಸಿಕೊಳ್ಳುತ್ತಿದೆ ಎಂದು ಜೆಡಿಎಸ್ ಆರೋಪ ಮಾಡಿತ್ತು.

ಅಲ್ಲದೆ, ಈ ಕುರಿತಂತೆ ಕೆಎಂಎಫ್ ಅಧ್ಯಕ್ಷ ರೇವಣ್ಣ, ಹಾಲು ಬೆಲೆ ಏರಿಕೆ ಸಂಬಂಧ ಸರ್ಕಾರಕ್ಕೆ 10 ದಿನಗಳ ಗಡುವು ನೀಡಿದ್ದರು. ಇದೀಗ ಲೆಕ್ಕ ಪರಿಶೋಧನೆಗೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊಗೇನಕಲ್: ಸಾವು-ನೋವಿಗೆ ಕರುಣಾನಿಧಿಯೇ ಹೊಣೆ-ಕರವೇ
ಆಪರೇಶನ್ ಕಮಲ ಪಕ್ಷಕ್ಕೆ ಮುಳುವು: ಎಚ್‌ಡಿಕೆ
ಮೇವರಿಕ್ ಗುತ್ತಿಗೆ : ಹೈಕೋರ್ಟ್ ತಡೆ
ಬಿಡಿಎ ಮುಖ್ಯ ಎಂಜಿನಿಯರ್ ಲೋಕಾಯುಕ್ತ ಬಲೆಗೆ
ಸರ್ಕಾರದಿಂದ ಪ್ರತಿಪಕ್ಷಗಳ ನಿರ್ಲಕ್ಷ್ಯ: ಪ್ರಕಾಶ್
ಹೊಗೇನಕಲ್: ದೆಹಲಿಗೆ ಸರ್ವಪಕ್ಷ ನಿಯೋಗ