ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೊಗೇನಕಲ್ ಯೋಜನೆಗೆ ಹಣ ನೀಡದಂತೆ ಪತ್ರ: ಬೊಮ್ಮಾಯಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೇನಕಲ್ ಯೋಜನೆಗೆ ಹಣ ನೀಡದಂತೆ ಪತ್ರ: ಬೊಮ್ಮಾಯಿ
NRB
ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿರುವ ಹೊಗೇನಕಲ್ ನೀರಾವರಿ ಯೋಜನೆಗೆ ತಮಿಳುನಾಡು ಟೆಂಡರ್ ಕರೆಯುವ ಸನ್ನಾಹಲ್ಲಿದ್ದು, ಜಪಾನ್‌ನ ಬ್ಯಾಂಕ್ ಆಫ್ ಇಂಟರ್‌ನ್ಯಾಶನಲ್ ಕಾರ್ಪೋರೇಶನ್ ಹಣ ನೀಡುವುದನ್ನು ತಡೆಯುವಂತೆ ಪತ್ರ ಬರೆಯುವುದಾಗಿ ಕರ್ನಾಟಕ ಎಚ್ಚರಿಕೆ ನೀಡಿದೆ.

1,334ಕೋಟಿ ರೂ.ವೆಚ್ಚದ ಹೊಗೇನಲ್ ನೀರಾವರಿ ಯೋಜನೆಗಾಗಿ ತಮಿಳುನಾಡು ಇದೀಗ ಟೆಂಡರ್ ಕರೆಯುವುದಾಗಿ ಹೇಳಿದೆ. ಆ ನಿಟ್ಟಿನಲ್ಲಿ ಯೋಜನೆಗೆ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸುವಂತೆ ಪತ್ರ ಬರೆಯುವುದಾಗಿ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಏತನ್ಮಧ್ಯೆ ಹೊಗೇನಕಲ್ ವಿವಾದವನ್ನು ಬಗೆಹರಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಲಾಗುವುದು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಈ ಯೋಜನೆಯನ್ನೂ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗೆ ಪತ್ರ ಬರೆಯಲೂ ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂಬುದಾಗಿಯೂ ಹೇಳಿದರು.

ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಹೊಗೇನಕಲ್ ನೀರಾವರಿ ಯೋಜನೆಯನ್ನು 2012ರೊಳಗೆ ಪೂರ್ಣಗೊಳಿಸುವುದಾಗಿ ತಮಿಳುನಾಡು ಈಗಾಗಲೇ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೆಎಂಎಫ್- ಸರ್ಕಾರದ ನಡುವೆ ಜಟಾಪಟಿ
ಹೊಗೇನಕಲ್: ಸಾವು-ನೋವಿಗೆ ಕರುಣಾನಿಧಿಯೇ ಹೊಣೆ-ಕರವೇ
ಆಪರೇಶನ್ ಕಮಲ ಪಕ್ಷಕ್ಕೆ ಮುಳುವು: ಎಚ್‌ಡಿಕೆ
ಮೇವರಿಕ್ ಗುತ್ತಿಗೆ : ಹೈಕೋರ್ಟ್ ತಡೆ
ಬಿಡಿಎ ಮುಖ್ಯ ಎಂಜಿನಿಯರ್ ಲೋಕಾಯುಕ್ತ ಬಲೆಗೆ
ಸರ್ಕಾರದಿಂದ ಪ್ರತಿಪಕ್ಷಗಳ ನಿರ್ಲಕ್ಷ್ಯ: ಪ್ರಕಾಶ್