ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭಿನ್ನಾಭಿಪ್ರಾಯ ತ್ಯಜಿಸಲು ಡಿಕೆಶಿ ಸಲಹೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಿನ್ನಾಭಿಪ್ರಾಯ ತ್ಯಜಿಸಲು ಡಿಕೆಶಿ ಸಲಹೆ
ಕಾಂಗ್ರೆಸ್ ಪಕ್ಷದ ನಾಯಕರಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾರ್ಯಕರ್ತರಲ್ಲಿರುವ ತಾಳ್ಮೆ ಹಾಗೂ ಹುಮ್ಮಸ್ಸನ್ನು ಬಳಸಿಕೊಂಡರೆ ಉಪಚುನಾವಣೆಯಲ್ಲಿ ಪಕ್ಷ ಜಯಗಳಿಸಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷದ ಮುಖಂಡರು ನಿಗಮಮಂಡಳಿ ಅಧ್ಯಕ್ಷರಾಗಲು, ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲು ಮುಂದಿರುತ್ತಾರೆ. ಆದರೆ ಬೇರು ಮಟ್ಟದಲ್ಲಿ ಪಕ್ಷವನ್ನು ಕಟ್ಟುವ ಕಾರ್ಯಕರ್ತರು ಅನೇಕ ಸಮಸ್ಯೆಗಳಲ್ಲಿ ಸಿಲುಕಿರುತ್ತಾರೆ. ಅವರಿಗೆ ಶಕ್ತಿ ತುಂಬಬೇಕಾದರೆ ಮುಖಂಡರು ಭಿನ್ನಾಭಿಪ್ರಾಯ ಮರೆಯಬೇಕು ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಮಧುಗಿರಿ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಪಕ್ಷ ಗೆಲುವು ನಿಶ್ಚಿತ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮುಂದೆ ಬರಬೇಕೆಂದು ಅವರು ಕರೆ ನೀಡಿದರು.

ಇದೇ ವೇಳೆ ಶಾಸ್ತ್ರೀಯ ಸ್ಥಾನಮಾನದ ಕುರಿತು ಮಾತನಾಡಿದ ಅವರು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡುವಲ್ಲಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಐತಿಹಾಸಿಕ ನಿರ್ಧಾರವೇ ಕಾರಣ ಎಂದು ಬಣ್ಣಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಕ್ಷ ತೊರೆಯುವತ್ತ ಸಿದ್ದರಾಮಯ್ಯ ಚಿತ್ತ ?
ಹೊಗೇನಕಲ್ ಯೋಜನೆಗೆ ಹಣ ನೀಡದಂತೆ ಪತ್ರ: ಬೊಮ್ಮಾಯಿ
ಕೆಎಂಎಫ್- ಸರ್ಕಾರದ ನಡುವೆ ಜಟಾಪಟಿ
ಹೊಗೇನಕಲ್: ಸಾವು-ನೋವಿಗೆ ಕರುಣಾನಿಧಿಯೇ ಹೊಣೆ-ಕರವೇ
ಆಪರೇಶನ್ ಕಮಲ ಪಕ್ಷಕ್ಕೆ ಮುಳುವು: ಎಚ್‌ಡಿಕೆ
ಮೇವರಿಕ್ ಗುತ್ತಿಗೆ : ಹೈಕೋರ್ಟ್ ತಡೆ