ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರು ಕಾಲೇಜಿಗೆ ಅಡಿಗರ ಕೊಡುಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರು ಕಾಲೇಜಿಗೆ ಅಡಿಗರ ಕೊಡುಗೆ
PTI
'ದಿ ವೈಟ್ ಟೈಗರ್' ಕಾದಂಬರಿ ಮೂಲಕ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಗಳಿಸಿದ ಮಂಗಳೂರು ಮೂಲದ ಅರವಿಂದ ಅಡಿಗ ಅವರು, ಪ್ರಶಸ್ತಿಯ ಮೊತ್ತದಲ್ಲಿನ ಸ್ವಲ್ಪ ಭಾಗವನ್ನು ಮಂಗಳೂರಿನ ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.

ತಾವು ಕಲಿತ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗೆ ಪ್ರಶಸ್ತಿಯ ಮೊತ್ತದ ಮೂರನೇ ಒಂದು ಭಾಗವನ್ನು ಅವರು ನೀಡಿದ್ದಾರೆ. ಅಲ್ಲದೆ, ಬೂಕರ್ ಟ್ರೋಪಿಯನ್ನು ಶಾಲೆಗೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅಲೋಶಿಯಸ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ಡೆಂಜಿಲ್ ಲೋಬೋ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಲ್ಕು ದಿನಗಳ ಮೊದಲು ದೂರವಾಣಿ ಮುಖೇನ ಸಂಪರ್ಕಿಸಿ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಸ್ಮರಣೆಯಲ್ಲಿ ತಮ್ಮ ಪ್ರಶಸ್ತಿ ಮೊತ್ತದ ಒಂದು ಪಾಲನ್ನು ಸಂಸ್ಥೆಗೆ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಈಗಾಗಲೇ ಅಡಿಗರು 15 ಲಕ್ಷ ರೂ. ಮೊತ್ತವನ್ನು ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಫಾ. ಫ್ರಾನ್ಸಿಸ್ ಸೆರಾವೊ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ, ಅಡಿಗ ಅವರ ಹಂಬಲದಂತೆ ಉಳ್ಳಾಲದ ಕೋಟೆಕಾರಿನಲ್ಲಿರುವ ಅಲೋಶಿಯಸ್ ಬಾಲಾಪರಾಧಿಗಳ ಕೇಂದ್ರದವರ ಕ್ಷೇಮಾಭಿವೃದ್ಧಿಗೆ ಈ ಮೊತ್ತವನ್ನು ಬಳಸಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಅಲ್ಲದೆ, ಟ್ರೋಪಿಯನ್ನು ಶಾಲೆಗೆ ನೀಡಲು ಉದ್ದೇಶಿಸಿರುವ ಅಡಿಗರು ಈ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿದೆ. ಹಾಗೆಯೇ, ತನಗೆ ಸಿಕ್ಕಿರುವ ಸೆಲೆಬ್ರಿಟಿ ಸ್ಥಾನಮಾನವನ್ನು ಬಳಸಿಕೊಂಡು ಅಲೋಶಿಯಸ್ ಸಂಸ್ಥೆಯವರು 60 ಕೋಟಿ ರೂ. ಮೊತ್ತದ ಮ್ಯಾನೇಜ್ ಮೆಂಟ್ ಹಾಗೂ ಇನ್ಫೋರ್ಮೇಶನ್ ಟೆಕ್ನಾಲಜಿ ಕ್ಯಾಂಪಸ್ ಗೆ ಧನಸಹಾಯ ಸಂಗ್ರಹಿಸುವ ಉದ್ದೇಶವೂ ಅಡಿಗರದ್ದಾಗಿದೆ ಎಂದು ಡೆಂಜಿಲ್ ರೋಬೋ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಗರದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಕರಂದ್ಲಾಜೆ
ಭಿನ್ನಾಭಿಪ್ರಾಯ ತ್ಯಜಿಸಲು ಡಿಕೆಶಿ ಸಲಹೆ
ಪಕ್ಷ ತೊರೆಯುವತ್ತ ಸಿದ್ದರಾಮಯ್ಯ ಚಿತ್ತ ?
ಹೊಗೇನಕಲ್ ಯೋಜನೆಗೆ ಹಣ ನೀಡದಂತೆ ಪತ್ರ: ಬೊಮ್ಮಾಯಿ
ಕೆಎಂಎಫ್- ಸರ್ಕಾರದ ನಡುವೆ ಜಟಾಪಟಿ
ಹೊಗೇನಕಲ್: ಸಾವು-ನೋವಿಗೆ ಕರುಣಾನಿಧಿಯೇ ಹೊಣೆ-ಕರವೇ