ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅದ್ದೂರಿ ಕನಕ ಜಯಂತಿಗೆ ಸಿದ್ಧತೆ: ಕರಂದ್ಲಾಜೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅದ್ದೂರಿ ಕನಕ ಜಯಂತಿಗೆ ಸಿದ್ಧತೆ: ಕರಂದ್ಲಾಜೆ
NRB
ಕನಕ ಜಯಂತಿಗೆ (ನಂ.15) ಈಗಾಗಲೇ ಸಾರ್ವತ್ರಿಕ ರಜೆ ಘೋಷಿಸಿರುವ ರಾಜ್ಯ ಸರ್ಕಾರ ಬೆಂಗಳೂರು, ಉಡುಪಿ ಹಾಗೂ ಕನಕದಾಸರ ಜನ್ಮಸ್ಥಳವಾದ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದಲ್ಲಿ ಅದ್ದೂರಿ ಸಮಾರಂಭಗಳನ್ನು ಆಯೋಜಿಸಲು ನಿರ್ಧರಿಸಿದೆ.

ಈ ಸಂಬಂಧ ಕನಕ ಜಯಂತಿಯಂದು ವಿಧಾನಸೌಧದ ಮುಂಭಾಗದಲ್ಲಿ ಅದ್ದೂರಿ ಸಮಾರಂಭ ಆಯೋಜಿಸಲಾಗುವುದು. ಹಾಗೆಯೇ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌‌ನಲ್ಲಿ ಅಂದು ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ ಅವರು, ಕನಕದಾಸರ ಜನ್ಮಸ್ಥಳದವಾದ ಬಾಡದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಯೋಜಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕಾಗಿನೆಲೆ ಪ್ರಾಧಿಕಾರದ ಮೂಲಕ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಲ್ಲದೆ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಿ, ಶಾಸನ ರೂಪಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್ಲಾ ತಾಲೂಕುಗಳಿಗೂ ನಿರಂತರ ವಿದ್ಯುತ್: ಈಶ್ವರಪ್ಪ
ಮಂಗಳೂರು ಕಾಲೇಜಿಗೆ ಅಡಿಗರ ಕೊಡುಗೆ
ನಗರದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಕರಂದ್ಲಾಜೆ
ಭಿನ್ನಾಭಿಪ್ರಾಯ ತ್ಯಜಿಸಲು ಡಿಕೆಶಿ ಸಲಹೆ
ಪಕ್ಷ ತೊರೆಯುವತ್ತ ಸಿದ್ದರಾಮಯ್ಯ ಚಿತ್ತ ?
ಹೊಗೇನಕಲ್ ಯೋಜನೆಗೆ ಹಣ ನೀಡದಂತೆ ಪತ್ರ: ಬೊಮ್ಮಾಯಿ