ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆಳ್ವರಿಗೆ ಮಾತಿನ ಮೇಲೆ ಹಿಡಿತವಿರಲಿ: ಖರ್ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಳ್ವರಿಗೆ ಮಾತಿನ ಮೇಲೆ ಹಿಡಿತವಿರಲಿ: ಖರ್ಗೆ
ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಹಂಚಿಕೆಯಲ್ಲಿ ಹಣದ ಹೊಳೆ ಹರಿದಿತ್ತು ಎಂಬ ಮಾರ್ಗರೇಟ್ ಆಳ್ವ ಅವರ ಹೇಳಿಕೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ವಿಧಾನಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಗರೇಟ್ ಆಳ್ವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ. ಇಂತಹ ಹೇಳಿಕೆ ನೀಡುವ ಮೊದಲು ಏನು ಹೇಳುತ್ತಿದ್ದಾರೆಂಬ ಬಗ್ಗೆ ಗಮನವಿರಬೇಕು ಎಂದು ಹೇಳಿದ್ದಾರೆ.

ಟಿಕೆಟ್ ಹಂಚಿಕೆಯ ಕುರಿತು ಆಳ್ವಾ ಅವರು ನೀಡಿರುವ ಆಪಾದನೆ ದುರ್ದೈವದ ಸಂಗತಿ ಎಂದು ವಿಷಾದಿಸಿದ ಖರ್ಗೆ, ಉಪಚುನಾವಣೆಯ ವೇಳೆ ಇಂತಹ ಹೇಳಿಕೆ ಸರಿಯಲ್ಲ ಎಂದು ತಿಳಿಸಿದ್ದಾರೆ.

ಇಂತಹ ಆರೋಪ ಮಾಡಿರುವ ಮಾರ್ಗರೇಟ್ ಆಳ್ವ ವಿರುದ್ಧ ಕ್ರಮ ಕೈಗೊಳ್ಳುವುದು ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದ್ದು, ಈ ಕುರಿತು ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಲಿತ ಸಹಭೋಜನ: ಪೇಜಾವರ ಶ್ರೀಗಳಿಗೆ ಸವಾಲು
ಅದ್ದೂರಿ ಕನಕ ಜಯಂತಿಗೆ ಸಿದ್ಧತೆ: ಕರಂದ್ಲಾಜೆ
ಎಲ್ಲಾ ತಾಲೂಕುಗಳಿಗೂ ನಿರಂತರ ವಿದ್ಯುತ್: ಈಶ್ವರಪ್ಪ
ಮಂಗಳೂರು ಕಾಲೇಜಿಗೆ ಅಡಿಗರ ಕೊಡುಗೆ
ನಗರದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಕರಂದ್ಲಾಜೆ
ಭಿನ್ನಾಭಿಪ್ರಾಯ ತ್ಯಜಿಸಲು ಡಿಕೆಶಿ ಸಲಹೆ