ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಾರ್ಗರೆಟ್ ಹೇಳಿಕೆಗೆ ಸಿದ್ದು ಸಹಮತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರ್ಗರೆಟ್ ಹೇಳಿಕೆಗೆ ಸಿದ್ದು ಸಹಮತ
ಕಾಂಗ್ರೆಸ್ ತನ್ನನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ತೀವ್ರ ಅಸಮಾಧಾನಗೊಂಡಿರುವ 'ವಲಸಿಗ' ನಾಯಕ ಸಿದ್ದರಾಮಯ್ಯ, ಮಾರ್ಗರೇಟ್ ಆಳ್ವಾ ಅವರ ಕಾಂಗ್ರೆಸ್ ವಿರುದ್ಧದ ಆರೋಪಗಳಿಗೆ ಸಾಥ್ ನೀಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆಗೆ ಕಾಂಗ್ರೆಸ್ ಟಿಕೆಟ್‌ಗಳನ್ನು ಮಾರಟ ಮಾಡಲಾಗಿದೆ ಎಂಬ ಹೇಳಿಕೆ ನೀಡಿರುವ ಪಕ್ಷದ ಹಿರಿಯ ನಾಯಕಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾರ್ಗರೇಟ್ ಆಳ್ವಾ ವಿವಾದಕ್ಕೆ ಸಿಲುಕಿದ್ದು, ಹೈಮಾಂಡ್‌ನಿಂದ ಶಿಸ್ತುಕ್ರಮ ಎದುರಿಸುತ್ತಿದ್ದಾರೆ.

ಕಾಂಗ್ರಸ್ ನಾಯಕಿಯವರ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸಹಮತ ಸೂಚಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಮಾರ್ಗೇರೇಟ್ ಆಳ್ವ ನೀಡಿರುವ ಹೇಳಿಕೆ ಸತ್ಯಾಂಶದಿಂದ ಕೂಡಿದ್ದು, ಸರಿಯಾಗಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.

ಈ ಕುರಿತು ವಿವರಣೆ ನೀಡಿದ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ಭಿನ್ನಾಭಿಪ್ರಾಯಗಳು ಕಂಡು ಬಂದಿದೆ. ಟಿಕೆಟ್ ಹಂಚಿಕೆಯಲ್ಲಿ ಸರಿಯಾದ ಮಾರ್ಗವನ್ನು ಪಕ್ಷ ಕೈಗೊಂಡಿರಲಿಲ್ಲ. ಇದುವೇ ಪಕ್ಷದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ತಿಳಿಸಿದ್ದಾರೆ.

ಉನ್ನತ ತನಿಖೆಗೆ ಒತ್ತಾಯ
ಏತನ್ಮಧ್ಯೆ, ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿರುವ ಆಳ್ವ ಕ್ರಮವನ್ನು ಖಂಡಿಸಿರುವ ಕೆಪಿಸಿಸಿ, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಮಾರ್ಗರೆಟ್ ಆಳ್ವ ಅವರು, ತಮ್ಮ ಪುತ್ರನಿಗೆ ಟಿಕೆಟ್ ಲಭಿಸಿಲ್ಲ ಎಂಬ ಹತಾಶೆಯಿಂದ ಈ ಹೇಳಿಕೆ ನೀಡಿದ್ದಾರೆ ಎಂದು ಕೆಪಿಸಿಸಿಯ ಹಿರಿಯ ನಾಯಕರು ಅಭಿಪ್ರಾಯಿಸಿದ್ದಾರೆ.

ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ವಿವಿಧ ಮಾನದಂಡಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದ ಮಾರ್ಗರೆಟ್ ಆಳ್ವ ಕರ್ನಾಟಕ ವಿಧಾನ ಸಭಾ ಚುನಾವಣೆ ವೇಳೆಗೆ ಟಿಕೆಟ್ ಹಣಕ್ಕೆ ಮಾರಾಟವಾಗಿತ್ತು ಎಂದು ಆಪಾದಿಸಿದ್ದರು. ಪ್ರಸ್ತುತ ಆರು ರಾಜ್ಯಗಳ ಚುನಾವಣೆಗೆ ಹಲವು ನಾಯಕರ ಸಂಬಂಧಿಗಳಿಗೆ ಟಿಕೆಟ್ ನೀಡಲಾಗಿದೆ. ಆದರೆ ಕಳೆದ ಬಾರಿ ಕರ್ನಾಟಕದಲ್ಲಿ ತನ್ನ ಪುತ್ರ ಹಾಗೂ ಜಾಫರ್ ಶರೀಫ್ ಅವರ ಮೊಮ್ಮಗನಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಒಬ್ಬೊಬ್ಬರಿಗ್ಯಾಕೆ ಒಂದೊಂದು ಮಾನದಂಡ ಎಂದು ಹೇಳಿರುವ ಅವರು ತನ್ನಪುತ್ರ ಹಾಗೂ ಜಾಫರ್ ಮೊಮ್ಮಗ ಕಳ್ಳರೇ, ಉಗ್ರರೇ ಇಲ್ಲ ದೇಶಭ್ರಷ್ಠರೇ ಎಂದು ಪ್ರಶ್ನಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮ್ಯಾಗಿಗೆ ಗುತ್ತೇದಾರ್ ಬೆಂಬಲ
ಆನೆಗಳ ಸಾವು: ವರದಿ ಸಲ್ಲಿಸಲು ಸರ್ಕಾರಕ್ಕೆ ಹೈ.ಕೋ ಅಪ್ಪಣೆ
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ
ಆಳ್ವ ಹೇಳಿಕೆಯಲ್ಲಿ ಹುರುಳಿಲ್ಲ: ದೇಶಪಾಂಡೆ
ಹೊಗೇನಕಲ್: ಕೇಂದ್ರದ ಮಧ್ಯಸ್ತಿಕೆಗೆ ಸಿಎಂ ಆಗ್ರಹ
ಆಳ್ವರಿಗೆ ಮಾತಿನ ಮೇಲೆ ಹಿಡಿತವಿರಲಿ: ಖರ್ಗೆ