ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೆಎಂಎಫ್: ರೇವಣ್ಣನಿಗೆ ಬೆಂಬಲಕ್ಕೆ ಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಎಂಎಫ್: ರೇವಣ್ಣನಿಗೆ ಬೆಂಬಲಕ್ಕೆ ಕುಮಾರ್
ರಾಜ್ಯ ಸರ್ಕಾರದೊಂದಿಗೆ ಕದನಕ್ಕಿಳಿದಿರುವ ಕೆಎಂಎಫ್ ಅಧ್ಯಕ್ಷ ಎಚ್.ಡಿ. ರೇವಣ್ಣ ಬೆಂಬಲಕ್ಕೆ ಅವರ ಕುಟುಂಬ ಮುಂದಾಗಿದೆ.

ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರದ ಜತೆ ಏಕಾಂಗಿ ಹೋರಾಟ ನಡೆಸುತ್ತಿದ್ದ ರೇವಣ್ಣನವರಿಗೆ ಬೆಂಬಲ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರೇವಣ್ಣ ಅವರ ವಿರುದ್ಧ ಸರ್ಕಾರ ನಡೆಸುತ್ತಿರುವ ಪಿತೂರಿ ಎಂದು ಕಿಡಿಕಾರಿದ್ದಾರೆ.

ಕೆಎಂಎಫ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರ ಐದಾರು ಬಾರಿ ತನಿಖೆ ನಡೆಸಿದ್ದಲ್ಲದೆ, 21 ಮಂದಿ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿರುವುದರ ವಿರುದ್ಧ ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ, ಕಾನೂನು ಸಮರವಾದರೂ ಆಗಲಿ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿರುವ ರೇವಣ್ಣ ಕುಟುಂಬ, ಹಾಲು ಉತ್ಪಾದಕರ ಬೃಹತ್ ಸಮಾವೇಶ ನಡೆಸಿ ಸರ್ಕಾರದ ನಡತೆಯ ಬಗ್ಗೆ ಮನವರಿಕೆ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾರ್ಗರೆಟ್ ಹೇಳಿಕೆಗೆ ಸಿದ್ದು ಸಹಮತ
ಮ್ಯಾಗಿಗೆ ಗುತ್ತೇದಾರ್ ಬೆಂಬಲ
ಆನೆಗಳ ಸಾವು: ವರದಿ ಸಲ್ಲಿಸಲು ಸರ್ಕಾರಕ್ಕೆ ಹೈ.ಕೋ ಅಪ್ಪಣೆ
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ
ಆಳ್ವ ಹೇಳಿಕೆಯಲ್ಲಿ ಹುರುಳಿಲ್ಲ: ದೇಶಪಾಂಡೆ
ಹೊಗೇನಕಲ್: ಕೇಂದ್ರದ ಮಧ್ಯಸ್ತಿಕೆಗೆ ಸಿಎಂ ಆಗ್ರಹ