ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಕ್ಷ ಬಿಟ್ಟವರಿಗೆ ನೋ ಎಂಟ್ರಿ: ಕುಮಾರಸ್ವಾಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷ ಬಿಟ್ಟವರಿಗೆ ನೋ ಎಂಟ್ರಿ: ಕುಮಾರಸ್ವಾಮಿ
NRB
ವೈಮನಸ್ಸಿನಿಂದ ಪಕ್ಷ ಬಿಟ್ಟವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರನ್ನು ಕರೆ ತರುವ ಬದಲು ಪಕ್ಷದ ದ್ವಿತೀಯ ಹಂತದ ನಾಯಕರಿಗೆ ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.

ಹಲವು ಕಾರಣಗಳಿಂದ ಪಕ್ಷದ ನಾಯಕರ ವಿರುದ್ಧ ಬಂಡೆದ್ದು ಹೋಗಿರುವವರು ಮತ್ತೆ ಪಕ್ಷಕ್ಕೆ ಬಂದರೆ ನಾಯಕರಲ್ಲಿ ವೈಮನಸ್ಸಿನ ಬೀಜ ಬಿತ್ತುತ್ತಾರೆ. ಈ ಕಾರಣಗಳಿಂದ ಅವರ ಸಹವಾಸಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಿದ್ದಾರೆ.

ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಡಬಾರದೆಂಬ ಉದ್ದೇಶದಿಂದ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಜತೆ ಮೈತ್ರಿ ಪ್ರಸ್ತಾಪ ಮಾಡುವುದಿಲ್ಲ ಎಂದೂ ಅವರು ಹೇಳಿದರು.

ಹೋಮ ಹವನದೊಂದಿಗೆ ಅಧಿಕಾರ ಸ್ವೀಕಾರ:
ರೇವಣ್ಣನವರ ಮಾರ್ಗದರ್ಶನದಲ್ಲಿ 8 ರಿಂದ 10 ಮಂದಿ ಪುರೋಹಿತರು ಬೇರೆ ಬೇರೆ ಹೋಮ-ಹವನ ನಡೆಸಿದ ನಂತರ ಸೋಮವಾರ ಮಧ್ಯಾಹ್ನ 3.30ಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೇವಣ್ಣರನ್ನು ಹೊರ ಹಾಕಿ
ಮ್ಯಾಗಿ: ಕೆಪಿಸಿಸಿಯಿಂದ ವಿವರಣೆ ಕೇಳಿದ ಹೈಕಮಾಂಡ್
ಕೆಎಂಎಫ್: ರೇವಣ್ಣನಿಗೆ ಬೆಂಬಲಕ್ಕೆ ಕುಮಾರ್
ಮಾರ್ಗರೆಟ್ ಹೇಳಿಕೆಗೆ ಸಿದ್ದು ಸಹಮತ
ಮ್ಯಾಗಿಗೆ ಗುತ್ತೇದಾರ್ ಬೆಂಬಲ
ಆನೆಗಳ ಸಾವು: ವರದಿ ಸಲ್ಲಿಸಲು ಸರ್ಕಾರಕ್ಕೆ ಹೈ.ಕೋ ಅಪ್ಪಣೆ