ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 4 ಶಂಕಿತ ಉಗ್ರರು ಮಂಗಳೂರು ಪೊಲೀಸ್ ವಶಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
4 ಶಂಕಿತ ಉಗ್ರರು ಮಂಗಳೂರು ಪೊಲೀಸ್ ವಶಕ್ಕೆ
ಮುಂಬೈ ಪೊಲೀಸರ ವಶದಲ್ಲಿದ್ದ ನಗರದ ನಾಲ್ವರು ಶಂಕಿತ ಉಗ್ರರನ್ನು ಮರಳಿ ಮಂಗಳೂರಿಗೆ ಕರೆತರಲಾಗಿದ್ದು, ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಶಕ್ಕೆ ಒಪ್ಪಿಸಲಾಗುವುದು.

ಅಪರಾಧ ಪತ್ತೆ ದಳದ ಇನ್ಸೆಪೆಕ್ಟರ್ ವೆಂಕಟೇಶ್ ಪ್ರಸನ್ನ ಅವರು, ಶಂಕಿತ ಉಗ್ರರನ್ನು ಹೆಚ್ಚಿನ ವಿಚಾರಣೆ ನಡೆಸಲು ತಮಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಗರಕ್ಕೆ ಕರೆತರಲಾಗಿದ್ದು, ಒಂದು ತಿಂಗಳ ಕಾಲ ಪೊಲೀಸರ ವಶದಲ್ಲಿರಿಸಲಾಗುವುದು ಎಂದು ತಿಳಿದು ಬಂದಿದೆ.

ಮುಂಬೈ ಪೊಲೀಸರು ಈ ಶಂಕಿತ ಉಗ್ರರಿಂದ ಹಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಆದರೆ ಭದ್ರತೆಯ ದೃಷ್ಟಿಯಿಂದ ರಹಸ್ಯಗಳನ್ನು ಬಹಿರಂಗಪಡಿಸಿಲ್ಲ ಎನ್ನಲಾಗಿದೆ.

ಈ ನಡುವೆ ಇಬ್ಬರು ಶಂಕಿತ ಉಗ್ರರನ್ನು ಭದ್ರತೆ ದೃಷ್ಟಿಯಿಂದ ಬೆಳಗಾವಿ ಜೈಲಿಗೆ ಕಳುಹಿಸಲಾಗಿದೆ. ಮೂಳೂರು ಫಕೀರ್ ಬಾವ ಹಾಗೂ ಬೋಳಂತೂರು ಮಹಮ್ಮದ್ ರಫೀಕ್ ಮೇಲೆ ಸಬ್ ಜೈಲ್‌ನಲ್ಲಿದ್ದ ಆರು ಮಂದಿ ಸಹಕೈದಿಗಳು ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ತನಿಖೆ ನಡೆಸಿದ ಪೊಲೀಸರು ಅಕ್ರಮ ಗಾಂಜಾ, ಚೂರಿ ವಶಪಡಿಸಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಗಾಳ ಕಚ್ಚುತ್ತಿರುವ ಅಂಬರೀಷ್?
ಪಕ್ಷ ಬಿಟ್ಟವರಿಗೆ ನೋ ಎಂಟ್ರಿ
ರೇವಣ್ಣರನ್ನು ಹೊರ ಹಾಕಿ
ಮ್ಯಾಗಿ: ಕೆಪಿಸಿಸಿಯಿಂದ ವಿವರಣೆ ಕೇಳಿದ ಹೈಕಮಾಂಡ್
ಕೆಎಂಎಫ್: ರೇವಣ್ಣನಿಗೆ ಬೆಂಬಲಕ್ಕೆ ಕುಮಾರ್
ಮಾರ್ಗರೆಟ್ ಹೇಳಿಕೆಗೆ ಸಿದ್ದು ಸಹಮತ