ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿದ್ಯುತ್ ಕೊರತೆಗೆ ಕೇಂದ್ರ ಕಾರಣ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದ್ಯುತ್ ಕೊರತೆಗೆ ಕೇಂದ್ರ ಕಾರಣ: ಸಿಎಂ
ರಾಜ್ಯದಲ್ಲಿ ವಿದ್ಯುತ್ ಕೊರತೆ ತೀವ್ರಗೊಳ್ಳಲು ಕೇಂದ್ರದ ತಾರತಮ್ಯ ಧೋರಣೆಯೇ ಕಾರಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿಯಲ್ಲಿ 24 ಗಂಟೆಗಳ ನಿರಂತರ ವಿದ್ಯುತ್ ನೀಡುವ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ತಲೆದೋರಿರುವ ತಾತ್ಕಾಲಿಕ ವಿದ್ಯುತ್ ಕೊರತೆ ನಿವಾರಿಸಲು ಹೆಚ್ಚುವರಿ ವಿದ್ಯುತ್ ಖರೀದಿ ಮಾಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಆಂಧ್ರ ಪ್ರದೇಶಕ್ಕೆ ಕಡಿಮೆ ವಿದ್ಯುತ್ ಕೊರತೆ ಇದ್ದರೂ ಅವರಿಗೆ 3 ಸಾವಿರ ಮೆಗಾವ್ಯಾಟ್ ನೀಡಲಾಗಿದೆ. ಆದರೆ ರಾಜ್ಯಕ್ಕೆ ಬರೀ 1543 ಮೆಗಾವ್ಯಾಟ್ ವಿದ್ಯುತ್ ನೀಡಿದೆ. ಈ ಕುರಿತು ಕೇಂದ್ರ ಸಚಿವ ಜೈರಾಮ್ ರಮೇಶ್ ಅವರನ್ನು ಕಂಡು ಈ ತಾರತಮ್ಯ ನಿವಾರಿಸುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿಗಳು, ಹಣಕೊಟ್ಟು ವಿದ್ಯುತ್ ಕೊಂಡುಕೊಳ್ಳಲಾಗದ ಇಂತಹ ಪರಿಸ್ಥಿತಿಯಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
4 ಶಂಕಿತ ಉಗ್ರರು ಮಂಗಳೂರು ಪೊಲೀಸ್ ವಶಕ್ಕೆ
ಬಿಜೆಪಿ ಗಾಳ ಕಚ್ಚುತ್ತಿರುವ ಅಂಬರೀಷ್?
ಪಕ್ಷ ಬಿಟ್ಟವರಿಗೆ ನೋ ಎಂಟ್ರಿ: ಕುಮಾರಸ್ವಾಮಿ
ರೇವಣ್ಣರನ್ನು ಹೊರ ಹಾಕಿ: ಬಿಜೆಪಿ ಆಗ್ರಹ
ಮ್ಯಾಗಿ: ಕೆಪಿಸಿಸಿಯಿಂದ ವಿವರಣೆ ಕೇಳಿದ ಹೈಕಮಾಂಡ್
ಕೆಎಂಎಫ್: ರೇವಣ್ಣನಿಗೆ ಬೆಂಬಲಕ್ಕೆ ಕುಮಾರ್