ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಬಿಎಂಪಿ ಚುನಾವಣೆಗೆ 4ತಿಂಗಳ ಹೈ.ಕೋ ಗಡು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಬಿಎಂಪಿ ಚುನಾವಣೆಗೆ 4ತಿಂಗಳ ಹೈ.ಕೋ ಗಡು
ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಹೈಕೋರ್ಟ್ ನಾಲ್ಕು ತಿಂಗಳ ಗಡುವು ನೀಡಿದೆ.

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠ ಆದೇಶ ಹೊರಡಿಸಿದ್ದು, ಮತ್ತೆ ಸಮಯಾವಕಾಶ ಕೋರದಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.

ಮೂರು ತಿಂಗಳೊಳಗೆ ಚುನಾವಣೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿರುವ ಬಗ್ಗೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ವಾರ್ಡ್‌ಗಳ ಪುನರ್ ವಿಂಗಡನೆ, ಮೀಸಲಾತಿ ಪ್ರಕ್ರಿಯೆಯ ಹಿನ್ನಲೆಯಲ್ಲಿ ಚುನಾವಣೆಗೆ ಸಮಯ ನೀಡಬೇಕೆಂದು ಮನವಿ ಮಾಡಿತ್ತು. ಅಲ್ಲದೆ, ಸರ್ಕಾರದ ಕಾರ್ಯಗಳು ಮುಗಿದ ತಕ್ಷಣದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗವು ತಿಳಿಸಿತ್ತು.

ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದ್ದು, ಮಾರ್ಚ್ ತಿಂಗಳೊಳಗೆ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಾಸಕರ ಕಡೆಗಣನೆ: ರೇಣುಕಾಚಾರ್ಯ ಆರೋಪ
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ 'ಪಟ್ಟಾಭಿಷೇಕ'
ಶಿರಾಡಿಘಾಟ್ ರಸ್ತೆ ಕಾಮಗಾರಿಗೆ ಗುತ್ತಿಗೆದಾರರ ಹಿಂದೇಟು
ಮ್ಯಾಗಿ ಹೇಳಿಕೆಯ ಸತ್ಯದ ಬಗ್ಗೆ ತನಿಖೆಯಾಗಲಿ: ಜಾಲಪ್ಪ
ವಿದ್ಯುತ್ ಕೊರತೆಗೆ ಕೇಂದ್ರ ಕಾರಣ: ಸಿಎಂ
4 ಶಂಕಿತ ಉಗ್ರರು ಮಂಗಳೂರು ಪೊಲೀಸ್ ವಶಕ್ಕೆ