ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆಳ್ವಾ ರಾಜೀನಾಮೆ ಸರಿಯಲ್ಲ: ಧರಂಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಳ್ವಾ ರಾಜೀನಾಮೆ ಸರಿಯಲ್ಲ: ಧರಂಸಿಂಗ್
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಾರ್ಗರೆಟ್ ಆಳ್ವ ಅವರು ರಾಜೀನಾಮೆ ನೀಡಿರುವುದು ಸರಿಯಲ್ಲ, ಅವರು ಪಕ್ಷದಲ್ಲಿಯೇ ಇದ್ದು ಮಾರ್ಗದರ್ಶಕರಾಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರು ಮಂಗಳವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಗುಲ್ಬರ್ಗಾದಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮಾರ್ಗರೆಟ್ ಆಳ್ವರಂಥ ಹಿರಿಯರು ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹಣಕ್ಕಾಗಿ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡಿದೆ ಎಂಬ ಆಳ್ವಾ ಅವರ ಆರೋಪಕ್ಕೆ ಹೈಕಮಾಂಡ್ ಕೆಂಡಾಮಂಡಲವಾಗಿತ್ತು, ಅಲ್ಲದೇ ಈ ಹೇಳಿಕೆ ಕುರಿತಾಗಿ ಹೈಕಮಾಂಡ್ ತೆಗೆದುಕೊಂಡ ನಿಲುವು ಕೂಡ ಆಳ್ವ ಅವರಿಗೆ ಅಸಮಾಧಾನವನ್ನುಂಟು ಮಾಡಿತ್ತು.

ಆ ನಿಟ್ಟಿನಲ್ಲಿ ಆಳ್ವ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೂ ಮಂಗಳವಾರ ಬೆಳಿಗ್ಗೆ ರಾಜೀನಾಮೆ ನೀಡಿದ್ದಾರೆ. ಆಳ್ವ ರಾಜಿನಾಮೆಯೊಂದಿಗೆ ಕಾಂಗ್ರೆಸ್ ಪಾಳಯದಲ್ಲಿನ ವೈಮನಸ್ಸು ಮತ್ತೆ ಬೀದಿಗೆ ಬಿದ್ದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದ್ಯುತ್ ಸಮಸ್ಯೆಗೆ ಬಿಜೆಪಿ ಕಾರಣ: ಎಚ್‌ಡಿಕೆ
ಉಪಚುನಾವಣೆಗೂ ಮುನ್ನ ಸಂಪುಟ ಪುನಾರಚನೆ?
ವಿದ್ಯುತ್ ಅಭಾವ: ಮುಖ್ಯಮಂತ್ರಿಗೆ ಮೊಯ್ಲಿ ತಿರುಗೇಟು
ಬಿಬಿಎಂಪಿ ಚುನಾವಣೆಗೆ 4ತಿಂಗಳ ಹೈ.ಕೋ ಗಡು
ಶಾಸಕರ ಕಡೆಗಣನೆ: ರೇಣುಕಾಚಾರ್ಯ ಆರೋಪ
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ 'ಪಟ್ಟಾಭಿಷೇಕ'