ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೆಎಂಎಫ್ ಮತ್ತೆ ಹೈಕೋರ್ಟ್‌ಗೆ ಮೊರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಎಂಎಫ್ ಮತ್ತೆ ಹೈಕೋರ್ಟ್‌ಗೆ ಮೊರೆ
ಕೆಎಂಎಫ್ ಮತ್ತು ಸರ್ಕಾರದ ನಡುವಿನ ಜಟಾಪಟಿ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ.

ತನ್ನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಮತ್ತು ಪದೇ ಪದೇ ಲೆಕ್ಕ ಪರಿಶೋಧನೆ ನಡೆಸುತ್ತಿರುವ ಸರ್ಕಾರದ ಕ್ರಮದ ವಿರುದ್ಧವೇ ಕೆಎಂಎಫ್ ಮಂಗಳವಾರ ಮತ್ತೆ ಹೈಕೋರ್ಟ್‌‌ನಲ್ಲಿ ದಾವೆ ಹೂಡಿದೆ.

ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ ಬಳಿಕ ಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಕೆಎಂಎಫ್ ಮುಂದಾಗಿದೆ. ಹಾಲಿನ ಮಾರಾಟ ದರ ಏರಿಕೆ ವಿಚಾರ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ಸರ್ಕಾರ ಮಾತುಕತೆ ಮೂಲಕ ಬಗೆಹರಿಸುವ ಲಕ್ಷಣಗಳು ಕಾಣದ್ದರಿಂದ ಕೋರ್ಟ್ ಮೂಲಕ ನ್ಯಾಯ ಕೇಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರದಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿದ್ದು, ಮಂಗಳವಾರ ಆಡಳಿತ ಮಂಡಳಿ ನಿರ್ದೇಶಕರು ಇನ್ನೊಂದು ಅರ್ಜಿ ಸಲ್ಲಿಸಿದ್ದಾರೆ.

ಅಗಸ್ಟ್‌ನಲ್ಲಿ ಹಾಲಿನ ದರವನ್ನು 2 ರೂ. ಹೆಚ್ಚಳ ಬಗ್ಗೆ ಎಚ್.ಡಿ. ರೇವಣ್ಣ ಅಧ್ಯಕ್ಷರಾಗಿರುವ ಕೆಎಂಎಫ್ ಹಾಗೂ ಅದರ 13 ಜಿಲ್ಲಾ ಒಕ್ಕೂಟಗಳು ನಿರ್ಧಾರ ಕೈಗೊಂಡಿದ್ದವು. ಆದರೆ ಇದನ್ನು ವಿರೋಧಿಸಿದ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಲು ಮಾರಾಟ ದರವನ್ನು ಹೆಚ್ಚಿಸಬಾರದು ಎಂದು ಸಹಕಾರ ಕಾಯ್ದೆ 30(ಬಿ) ಪ್ರಕಾರ ನಿರ್ದೇಶನ ನೀಡಿತ್ತು.

ಇದು ಕೆಎಂಎಫ್ ಮತ್ತು ಸರ್ಕಾರದ ನಡುವ ಜಗಳಕ್ಕೆ ಕಾರಣವಾಗಿದ್ದಲ್ಲದೆ, ಈ ನಿರ್ದೇಶನವನ್ನು ಉಲ್ಲಂಘಿಸಿ ದರ ಏರಿಕೆ ಮಾಡಿದರೆ ತನ್ನ ವಿರುದ್ಧ ಕಾನೂನು ಕ್ರಮ ಜರುಗಿಸುತ್ತದೆ ಎಂಬ ಕಾರಣಕ್ಕೆ ಕೆಎಂಎಫ್ ಮಾತುಕತೆ ನಡೆಸುವಂತೆ ಸರ್ಕಾರವನ್ನು ಹಲವು ಬಾರಿ ಕೇಳಿತ್ತು. ಆದರೆ ಮಾತುಕತೆಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಳ್ವಾ ರಾಜಿನಾಮೆ ಸರಿಯಲ್ಲ: ಧರಂಸಿಂಗ್
ವಿದ್ಯುತ್ ಸಮಸ್ಯೆಗೆ ಬಿಜೆಪಿ ಕಾರಣ: ಎಚ್‌ಡಿಕೆ
ಉಪಚುನಾವಣೆಗೂ ಮುನ್ನ ಸಂಪುಟ ಪುನಾರಚನೆ?
ವಿದ್ಯುತ್ ಅಭಾವ: ಮುಖ್ಯಮಂತ್ರಿಗೆ ಮೊಯ್ಲಿ ತಿರುಗೇಟು
ಬಿಬಿಎಂಪಿ ಚುನಾವಣೆಗೆ 4ತಿಂಗಳ ಹೈ.ಕೋ ಗಡು
ಶಾಸಕರ ಕಡೆಗಣನೆ: ರೇಣುಕಾಚಾರ್ಯ ಆರೋಪ