ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೌದ್ದ ಧರ್ಮವನ್ನು ಟೀಕಿಸಿಲ್ಲ: ಪೇಜಾವರಶ್ರೀ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೌದ್ದ ಧರ್ಮವನ್ನು ಟೀಕಿಸಿಲ್ಲ: ಪೇಜಾವರಶ್ರೀ
NRB
ಬೌದ್ಧ ಧರ್ಮಕ್ಕೆ ದಲಿತರು ಸೇರ್ಪಡೆಗೊಳ್ಳಬೇಡಿ ಎಂಬ ಹೇಳಿಕೆ ಮೂಲಕ ವಿವಾದಕ್ಕೆ ಕಾರಣವಾಗಿದ್ದ ಪೇಜಾವರ ಶ್ರೀಗಳು ಇದೀಗ ಮತ್ತೆ ಸ್ಪಷ್ಟನೆ ನೀಡಿದ್ದಾರೆ.

ನಾನು ಬೌದ್ಧ ಧರ್ಮವನ್ನು ಟೀಕಿಸಿಲ್ಲ. ಹಾಗಾಗಿ ಆಕ್ರೋಶಕ್ಕೆ ಏನೂ ಕಾರಣವಿಲ್ಲ. ಭಾರತದ ಆರು ದರ್ಶನಗಳಲ್ಲಿ ಬೌದ್ಧ ಧರ್ಮವೂ ಒಂದು. ಬೌದ್ಧ ಮತದ ದರ್ಶನ ಒಪ್ಪಿಗೆಯಾದಲ್ಲಿ ಅದನ್ನು ಸ್ವೀಕರಿಸುವುದರಲ್ಲಿ ನನ್ನ ಯಾವ ವಿರೋಧವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಂದೂ ದೇಶದಲ್ಲಿ ಹುಟ್ಟಿದ, ಈ ಮಣ್ಣಿನಲ್ಲಿ ಆವಿರ್ಭವಿಸಿದ ಧರ್ಮಗಳೆಲ್ಲ ಹಿಂದೂ ಧರ್ಮಗಳೇ ಆಗಿವೆ. ಆ ದೃಷ್ಟಿಯಿಂದ ಬೌದ್ಧ ಮತವೂ ಹಿಂದೂ ಪ್ರಭೇದವೇ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನನ್ನ ಹೇಳಿಕೆಯನ್ನು ಅಪಾರ್ಥ ಮಾಡದೆ, ನನ್ನ ಕಳಕಳಿಯನ್ನು ಅರ್ಥ ಮಾಡಿಕೊಂಡು ದಲಿತರೆಲ್ಲರೂ ನನ್ನ ಜೊತೆ ಸಹಕರಿಸಬೇಕು. ಮುಂದಿನ ಕಾರ್ಯಾಚರಣೆಯ ಬಗ್ಗೆ ಮಾತುಕತೆಗೆ ಹಾಗೂ ಸಂವಾದಕ್ಕೆ ಮುಂದಾಗಿದ್ದಾರೆ. ದಲಿತ ಮತ್ತು ದಲಿತೇತರ ಹಿಂದೂಗಳ ಸಹಕಾರದಿಂದ ಅಸ್ಪೃಶ್ಯತಾ ನಿವಾರಣೆಯಲ್ಲಿ ಪೂರ್ಣ ಯಶಸ್ಸನ್ನು ನಾವು ಕಾಣುತ್ತೆವೆಂದು ನನಗೆ ಭರವಸೆಯಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಲಸಿಗರಿಗಾಗಿ ತ್ಯಾಗಕ್ಕೆ ಸಿದ್ಧರಾಗಿ: ಸದಾನಂದಗೌಡ
ಕೆಎಂಎಫ್ ಮತ್ತೆ ಹೈಕೋರ್ಟ್‌ಗೆ ಮೊರೆ
ಆಳ್ವಾ ರಾಜಿನಾಮೆ ಸರಿಯಲ್ಲ: ಧರಂಸಿಂಗ್
ವಿದ್ಯುತ್ ಸಮಸ್ಯೆಗೆ ಬಿಜೆಪಿ ಕಾರಣ: ಎಚ್‌ಡಿಕೆ
ಉಪಚುನಾವಣೆಗೂ ಮುನ್ನ ಸಂಪುಟ ಪುನಾರಚನೆ?
ವಿದ್ಯುತ್ ಅಭಾವ: ಮುಖ್ಯಮಂತ್ರಿಗೆ ಮೊಯ್ಲಿ ತಿರುಗೇಟು