ತದಡಿಯಲ್ಲೇ ಅಲ್ಟ್ರಾಮೆಗಾ ಪವರ್ ಪ್ರಾಜೆಕ್ಟ್ (ಯುಎಂಪಿಪಿ) ಅನುಷ್ಟಾನಗೊಳಿಸಲು ಬಿಗಿಪಟ್ಟು ಹಿಡಿದಿದ್ದ ಕೇಂದ್ರ ಸರ್ಕಾರ ಈಗ ಮೃದು ಧೋರಣೆ ತಾಳಿದ್ದು, ಕೋಲಾರದ ಕೂಡಗಿಯಲ್ಲಿ 4000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅನುಮತಿ ನೀಡಿದೆ.
ಅಲ್ಲದೆ, ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ (ಎನ್ ಟಿಪಿಸಿ) ಸಹಭಾಗಿತ್ವದಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಯೋಜನೆಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯಕ್ಕೆ ಒಟ್ಟು 6000 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ.
ಕೂಡಗಿಯಲ್ಲಿ ಅಲ್ಟ್ರಾಮೆಗಾ ವಿದ್ಯುತ್ ಯೋಜನೆ ಕುರಿತು ಶೀಘ್ರದಲ್ಲಿ ಕೇಂದ್ರ ಹಣಕಾಸು ಖಾತೆ ಸಚಿವರೊಂದಿಗೆ ರಾಜ್ಯದ ಇಂಧನ ಸಚಿವರು ಮಾತುಕತೆ ನಡೆಸಲಿದ್ದಾರೆ.
ಈ ಕುರಿತು ನಗರದಲ್ಲಿ ಮಾಹಿತಿ ನೀಡಿದ ಕೇಂದ್ರ ಇಂಧನ ಖಾತೆ ಸಚಿವ ಜೈರಾಮ್ ರಮೇಶ್, ಕೂಡಗಿಗೆ 2000 ಮೆಗಾವ್ಯಾಟ್ ಸಾಮರ್ಥ್ಯವನ್ನು 4000 ಮೆಗಾವ್ಯಾಟ್‌ಗೆ ಏರಿಸಿ ಅಲ್ಲಿ ಯುಎಂಪಿಪಿಗೆ ಸಮನಾದ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ 4000 ಮೆಗಾವ್ಯಾಟ್ ಪೈಕಿ 1000 ಮೆಗಾವ್ಯಾಟ್ ವಿದ್ಯುತ್ತನ್ನು ನೆರೆ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕೆಂದು ತಿಳಿಸಿದ್ದಾರೆ. |