ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವೈದ್ಯರ ಮುಷ್ಕರದಿಂದ ಚಿಕಿತ್ಸೆಗಾಗಿ ಪರದಾಟ...
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೈದ್ಯರ ಮುಷ್ಕರದಿಂದ ಚಿಕಿತ್ಸೆಗಾಗಿ ಪರದಾಟ...
ರೋಗಿಗಳಿಗೆ ಪ್ರಾಣಸಂಕಟ
ಸರ್ಕಾರಿ ಗುತ್ತಿಗೆ ವೈದ್ಯಾಧಿಕಾರಿಗಳು ನಡೆಸುತ್ತಿರುವ ಮುಷ್ಕರ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನಿಂದ ತುರ್ತು ಸೇವೆಯನ್ನೂ ನಿಲ್ಲಿಸಿದ ಪರಿಣಾಮ ರೋಗಿಗಳು ಪರದಾಡುವಂತಾಗಿದೆ.

ನಗರದ ಬನ್ನಪ್ಪ ಉದ್ಯಾನವನದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಧರಣಿ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.

ಸಮಾನ ವೇತನ, ಅರೆಕಾಲಿಕ ವೈದ್ಯರ ಖಾಯಂಮಾತಿ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವಿಶೇಷ ಸೌಲಭ್ಯ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ಗುತ್ತಿಗೆ ವೈದ್ಯಾಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ.

ರೋಗಿಗಳ ಪರದಾಟ: ಮುಷ್ಕರವನ್ನು ತೀವ್ರಗೊಳಿಸಿರುವ ವೈದ್ಯಾಧಿಕಾರಿಗಳು ಇಂದಿನಿಂದ ಅಪಘಾತ ಸೇರಿದಂತೆ ತುರ್ತು ಸೇವೆಯನ್ನೂ ನೀಡುವುದಿಲ್ಲ ಎಂಬುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಆಸ್ಪತ್ರೆಗೆ ಆಗಮಿಸುತ್ತಿರುವ ರೋಗಿಗಳನ್ನು ಪರೀಕ್ಷಿಸದೇ ತಾವು ಮುಷ್ಕರಕ್ಕೆ ತೆರಳುತ್ತಿದ್ದು, ನೀವು ಬೇರೆ ಆಸ್ಪತ್ರೆಗೆ ಹೋಗಿ ಎಂದು ಹೇಳುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರೋಗಗದಿಂದ ಬಳಲುತ್ತಿರುವ ಮಕ್ಕಳು, ಮುದುಕರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತರುತ್ತಿದ್ದರೆ, ಮತ್ತೊಂದೆಡೆ ವೈದ್ಯರು ಮುಷ್ಕರದ ಬಿಸಿ ತಟ್ಟಬೇಕು ಎಂಬ ನೆಲೆಯಲ್ಲಿ ಯಾವುದೇ ರೀತಿಯ ಸೇವೆಯನ್ನೂ ನೀಡುತ್ತಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ರೋಗಿಗಳು ಪರದಾಡುವಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಸ್ತೆ ಅಗಲೀಕರಣಕ್ಕೆ ನಿರ್ಧಾರ: ಸುಬ್ರಹ್ಮಣ್ಯ ನಾಯ್ಡು
ಹೊಗೇನಕಲ್: ಮೊಯ್ಲಿ ಹೇಳಿಕೆಗೆ ಸಿಎಂ ಆಕ್ರೋಶ
ಕಾಂಗ್ರೆಸ್ ವಿರುದ್ಧ ಸಿಎಂ ಆಕ್ರೋಶ
ರಾಜ್ಯದ ಬೆದರಿಕೆಗೆ ಶಾಸ್ತ್ರೀಯ ಸ್ಥಾನ ನೀಡಿಲ್ಲ: ಮೊಯ್ಲಿ
ಬಿಜೆಪಿಯಿಂದ ಜನತೆಗೆ ವಿಶ್ವಾಸದ್ರೋಹ: ಎಚ್‌ಡಿಕೆ
ಶೀಘ್ರವೇ ನೂತನ ಸಾರಿಗೆ ನೀತಿ ಜಾರಿ: ಅಶೋಕ್