ನಗರದಲ್ಲಿನ ಪಿಯುಸಿ ಬೋರ್ಡ್‌ಗೆ ಬಾಂಬ್ ಸ್ಫೋಟ ಬೆದರಿಕೆ ಪತ್ರ ಬಂದಿದ್ದು, ಈ ಕುರಿತು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪಿಯು ಬೋರ್ಡ್, ಸಾರ್ವಜನಿಕ ಶಿಕ್ಷಣ ಇಲಾಖೆಗಳಿಗೆ ನ.10, 11, 12, 13ರಂದು ಬಾಂಬ್ ಇಟ್ಟು ಸ್ಫೋಟ ನಡೆಸುವುದಾಗಿ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಪೊಲೀಸರು ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರಿಯ ದಳದೊಂದಿಗೆ ತೀವ್ರ ತಪಾಸಣೆ ನಡೆಸಿರುವುದಾಗಿ ಹೇಳಿದರು.
ಪಿಯು ಬೋರ್ಡ್ ಅನ್ನು ನ.27ರೊಳಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಪತ್ರದಲ್ಲಿ ತಿಳಿಸಲಾಗಿತ್ತು. ಪತ್ರವನ್ನು ಪಿಯು ಬೋರ್ಡ್‌ಗೆ ಕೊರಿಯರ್ ಮೂಲಕ ಕಳುಹಿಸಲಾಗಿತ್ತು. ಈ ಕೊರಿಯರ್ ಅನ್ನು ಹುಬ್ಬಳ್ಳಿಯಿಂದ ರವಾನಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಂಬ್ ಸ್ಫೋಟ ಬೆದರಿಕೆ ಪತ್ರದ ಕುರಿತು ಇಲಾಖೆ ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಇಲಾಖೆ ಹೇಳಿದೆ. |