ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರಿನಲ್ಲಿ ಮತ್ತೆ ಮತಾಂತರ ರಾದ್ಧಾಂತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿನಲ್ಲಿ ಮತ್ತೆ ಮತಾಂತರ ರಾದ್ಧಾಂತ
ನಗರದ ಜೀವನಹಳ್ಳಿಯಲ್ಲಿ ರಾಜಾರೋಷವಾಗಿ ಮತಾಂತರಕ್ಕೆ ಯತ್ನಿಸುತ್ತಿದ್ದ ಮೂರು ಮಂದಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಜೀವನಹಳ್ಳಿಯಲ್ಲಿ ಮನೆ, ಮನೆಗೆ ತೆರಳಿ ಕ್ರೈಸ್ತ ಮತದ ಕುರಿತು ಬೋಧನೆ ಮಾಡಿ ಕರಪತ್ರ ಹಂಚುತ್ತಿದ್ದ ಮೂರು ಮಂದಿಯನ್ನು ಮಹಿಳೆಯರನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ.

ಜೆಸಿ ನಗರದ ಕಮಲಮ್ಮ, ಸಂಧ್ಯಾ ಸೇರಿದಂತೆ ಮೂರು ಮಂದಿ ಮಹಿಳೆಯರನ್ನು ಬುಧವಾರ ಸಂಜೆ ಮತಾಂತರ ಪರ ಪ್ರಚಾರ ಮಾಡುತ್ತಿದ್ದ ಸಂದರ್ಭ ಸಾರ್ವಜನಿಕರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಅಲ್ಲದೇ ಅವರಿಂದ ಕ್ರೈಸ್ತ ಧರ್ಮದ ಪುಸ್ತಕ, ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಳಿಕ ಪ್ರೇಜರ್ ಟೌನ್ ಪೊಲೀಸ್ ಠಾಣೆಯ ಮುಂಭಾಗ ನೆರೆದ ಸಾರ್ವಜನಿಕರು ಮತಾಂತರದ ವಿರುದ್ಧ ಘೋಷಣೆ ಕೂಗಿ, ಮತಾಂತರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಇತ್ತೀಚೆಗೆ ಈ ಭಾಗದಲ್ಲಿ ಮತಾಂತರಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದೇ ರೀತಿ ಹಿಂದೂ ಧರ್ಮದವರಿಗೆ ಆಮೀಷವೊಡ್ಡಿ ಮತಾಂತರ ಮಾಡುವ ಕೆಲಸ ಮುಂದುವರಿಸಿದ್ದೇ ಆದಲ್ಲಿ ಅಂತಹವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ
ಶಾಸ್ತ್ರೀಯ ಸ್ಥಾನ: ನೂರು ಮಂದಿಗೆ ಸನ್ಮಾನ
ವೈದ್ಯರ ಮುಷ್ಕರ: 3 ಬೇಡಿಕೆ ಈಡೇರಿಕೆ
ಪಿಯು ಬೋರ್ಡ್‌ಗೆ ಬಾಂಬ್ ಬೆದರಿಕೆ ಪತ್ರ !
ಶಾಸ್ತ್ರೀಯ ಸ್ಥಾನ: ಮದ್ರಾಸ್ ಹೈಕೋರ್ಟ್ ವಿಚಾರಣೆ
ಕಟ್ಟಡ ಕುಸಿತ ಪ್ರಕರಣ: ಅವಶೇಷದಡಿ ಶವ ಪತ್ತೆ