ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ನಂದಗುಡಿ' ಲೋಕಾಯುಕ್ತ ತನಿಖೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ನಂದಗುಡಿ' ಲೋಕಾಯುಕ್ತ ತನಿಖೆಗೆ
ಹೊಸಕೋಟೆ ಸಮೀಪದ ನಂದಗುಡಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ಯೋಜನೆಯ ತನಿಖೆಯನ್ನು ಸರ್ಕಾರ ಲೋಕಾಯುಕ್ತಕ್ಕೆ ನೀಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮಗಳಲ್ಲಿನ 18,507 ಎಕರೆ ಪ್ರದೇಶದಲ್ಲಿ 17,909 ಕೋಟಿ ರೂ.ಗಳ ಈ ಯೋಜನೆಯನ್ನು ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಮಂಜೂರು ಮಾಡಿತ್ತು.

ಈ ಯೋಜನೆಯಲ್ಲಿ 8ಪಥಗಳ ಎಕ್ಸ್‌ಪ್ರೆಸ್ ವೇ, ವಿಶೇಷ ಆರ್ಥಿಕ ವಲಯದ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ 30ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಎಸ್‌ಕೆಐಎಲ್ ಇದಕ್ಕಾಗಿ 22,065 ಎಕರೆ ಭೂಮಿಯನ್ನು ವಶಪಡಿಸಿಕೊಡುವಂತೆ ಕೆಐಎಡಿಬಿಗೆ ಮನವಿ ಮಾಡಿತ್ತು.

2007ರ ಏ.10ರಂದು ನಡೆದ ಸಮಿತಿ ಸಭೆಯಲ್ಲಿ ಪ್ರಸ್ತಾವನೆಗೆ ಮಂಜೂರು ದೊರೆತಿತ್ತು. ಅಲ್ಲದೇ 2007ರ ಜೂ.16ರಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ದೊರೆತಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಿಕೆಟ್ ಮಾರಾಟ: ಕಾಗೋಡು ಮಂಪರು ಪರೀಕ್ಷೆಗೆ ಆಗ್ರಹ
ಕೆಎಂಎಫ್: ಸರ್ಕಾರದ ವಿವರಣೆ ಕೋರಿದ ಹೈಕೋರ್ಟ್
ಬೆಂಗಳೂರು ಪುಸ್ತಕೋತ್ಸವಕ್ಕೆ ನಾಳೆ ಚಾಲನೆ
ಸೋಲಿನ ಹತಾಶೆ: ಅಂಬರೀಷ್ ಸ್ಪರ್ಧೆಗೆ ಗುಡ್ ಬೈ
ವೈದ್ಯರ ಮುಷ್ಕರ ತೀವ್ರ: ರೋಗಿಗಳ ಪರದಾಟ
ಬೆಂಗಳೂರಿನಲ್ಲಿ ಮತ್ತೆ ಮತಾಂತರ ರಾದ್ಧಾಂತ