ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಡೊನೇಷನ್ ತಡೆಗೆ ನೂತನ ನೀತಿ: ಕಾಗೇರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡೊನೇಷನ್ ತಡೆಗೆ ನೂತನ ನೀತಿ: ಕಾಗೇರಿ
ಶಾಲಾ-ಕಾಲೇಜುಗಳಲ್ಲಿ ಮಿತಿಮೀರಿ ವಸೂಲಿ ಮಾಡುತ್ತಿರುವ ಡೊನೇಷನ್ ತಡೆಗೆ ನೂತನ ನೀತಿಯನ್ನು ಜಾರಿಗೆ ತರುವ ಕುರಿತು ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಗುರುವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತರುವ ವಂತಿಗೆ ನೀತಿಯನ್ನು ಪರಿಗಣಿಸಿ ನೂತನ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಹೊಸ ನೀತಿ ರೂಪಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇನ್ನು ಅಂತಿಮ ರೂಪ ನೀಡಿಲ್ಲ. ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಬಾರಿ ಹಳೇ ಮಾದರಿಯಲ್ಲೇ ನಡೆಯಲಿದೆ ಎಂದರು.

ಮುಂದಿನ ಸಾಲಿನ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದ ಅವರು, ಈ ಬಾರಿ ಯಾವುದೇ ಲೋಪವಾಗದಂತೆ ನಡೆಸಲು ಸಿದ್ದತೆ ನಡೆಸಲಾಗುವುದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ನಂದಗುಡಿ' ಲೋಕಾಯುಕ್ತ ತನಿಖೆಗೆ
ಟಿಕೆಟ್ ಮಾರಾಟ: ಕಾಗೋಡು ಮಂಪರು ಪರೀಕ್ಷೆಗೆ ಆಗ್ರಹ
ಕೆಎಂಎಫ್: ಸರ್ಕಾರದ ವಿವರಣೆ ಕೋರಿದ ಹೈಕೋರ್ಟ್
ಬೆಂಗಳೂರು ಪುಸ್ತಕೋತ್ಸವಕ್ಕೆ ನಾಳೆ ಚಾಲನೆ
ಸೋಲಿನ ಹತಾಶೆ: ಅಂಬರೀಷ್ ಸ್ಪರ್ಧೆಗೆ ಗುಡ್ ಬೈ
ವೈದ್ಯರ ಮುಷ್ಕರ ತೀವ್ರ: ರೋಗಿಗಳ ಪರದಾಟ