ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗರುಡಮಾಲ್ ಪ್ರಕರಣ ಲೋಕಾಯುಕ್ತ ತನಿಖೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗರುಡಮಾಲ್ ಪ್ರಕರಣ ಲೋಕಾಯುಕ್ತ ತನಿಖೆಗೆ
ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಗರುಡಮಾಲ್ ಬಹುಮಹಡಿ ಕಟ್ಟಡ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರದ ಕುರಿತಂತೆ ಲೋಕಾಯುಕ್ತಕ್ಕೆ ತನಿಖೆ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಾರ್ಯಗಾರ ಮತ್ತು ಉಗ್ರಾಣ ಪ್ರದೇಶದಲ್ಲಿ ಬಹುಮಹಡಿ ವಾಹನ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಮೆಗಾರಿಕ್ ಸಂಸ್ಥೆಗೆ ನೀಡಿದ್ದ ಪರವಾನಗಿ ಕುರಿತಂತೆ ಲೋಕಾಯುಕ್ತ ತನಿಖೆ ನಡೆಯಲಿದೆ.

ಮಹಾನಗರ ಪಾಲಿಕೆ ಹಾಗೂ ಮೆಗಾರಿಕ್ ಸಂಸ್ಥೆ ಜಂಟಿಯಾಗಿ ಈ ವಾಣಿಜ್ಯ ಸಂಕೀರ್ಣದ ನಿರ್ಮಾಣ ಕಾಮಗಾರಿ ಕೈಗೊಂಡಿತ್ತು. ಈ ಕಟ್ಟಡ ನಿರ್ಮಾಣವನ್ನು ಮೆಗಾರಿಕ್ ಸಂಸ್ಥೆಗೆ ವಹಿಸುವ ಬಗ್ಗೆ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ಪ್ರತಿಪಕ್ಷದ ನಾಯಕರು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡೊನೇಷನ್ ತಡೆಗೆ ನೂತನ ನೀತಿ: ಕಾಗೇರಿ
'ನಂದಗುಡಿ' ಲೋಕಾಯುಕ್ತ ತನಿಖೆಗೆ
ಟಿಕೆಟ್ ಮಾರಾಟ: ಕಾಗೋಡು ಮಂಪರು ಪರೀಕ್ಷೆಗೆ ಆಗ್ರಹ
ಕೆಎಂಎಫ್: ಸರ್ಕಾರದ ವಿವರಣೆ ಕೋರಿದ ಹೈಕೋರ್ಟ್
ಬೆಂಗಳೂರು ಪುಸ್ತಕೋತ್ಸವಕ್ಕೆ ನಾಳೆ ಚಾಲನೆ
ಸೋಲಿನ ಹತಾಶೆ: ಅಂಬರೀಷ್ ಸ್ಪರ್ಧೆಗೆ ಗುಡ್ ಬೈ