ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವೈದ್ಯರ ವಿರುದ್ಧ ಹೈಕೋರ್ಟ್‌ಗೆ ದೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೈದ್ಯರ ವಿರುದ್ಧ ಹೈಕೋರ್ಟ್‌ಗೆ ದೂರು
ಕರ್ತವ್ಯವನ್ನೇ ಮರೆತು ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟು ಮಾಡಿರುವ ವೈದ್ಯರಿಗೆ ಕೂಡಲೇ ಸೇವೆಗೆ ತೆರಳುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಗುರುವಾರ ಹೈಕೋರ್ಟ್‌ಗೆ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಪುತ್ತಿಗೆ ರಮೇಶ್ ವಕಾಲತು ವಹಿಸಿರುವ ಒಂದು ಅರ್ಜಿ ಹಾಗೂ ಹಿರಿಯ ವಕೀಲ ವಾಸುದೇವ್ ಅವರು ವಕಾಲತ್ತು ವಹಿಸಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಕಿರಿಯ ವೈದ್ಯರು ಮುಷ್ಕರ ನಡೆಸುತ್ತಿರುವುದರಿಂದ ಬಡ ರೋಗಿಗಳು ತೀವ್ರ ಯಾತನೆಅನುಭವಿಸಬೇಕಾಗಿದೆ. ಆದ್ದರಿಂದ ಕೂಡಲೇ ಸೇವೆಗೆ ತೆರಳುವಂತೆ ಸೂಚಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಏತನ್ಮಧ್ಯೆ, ವೈದ್ಯರೊಂದಿಗೆ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಸಭೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ವೈದ್ಯರು ಒಂದು ವೇಳೆ ಸಭೆ ವಿಫಲವಾದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಳ್ವ ರಾಜೀನಾಮೆ ಅಂಗೀಕಾರ ಸರಿ: ಆಸ್ಕರ್
ಪ್ರಥಮ ಪಿಯುಸಿಗೆ ಪಬ್ಲಿಕ್ ಪರೀಕ್ಷೆ ಇಲ್ಲ: ಹೆಗಡೆ
ಗರುಡಮಾಲ್ ಪ್ರಕರಣ ಲೋಕಾಯುಕ್ತ ತನಿಖೆಗೆ
ಡೊನೇಷನ್ ತಡೆಗೆ ನೂತನ ನೀತಿ: ಕಾಗೇರಿ
'ನಂದಗುಡಿ' ಲೋಕಾಯುಕ್ತ ತನಿಖೆಗೆ
ಟಿಕೆಟ್ ಮಾರಾಟ: ಕಾಗೋಡು ಮಂಪರು ಪರೀಕ್ಷೆಗೆ ಆಗ್ರಹ