ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನೇಪಾಳ ಮಾದರಿ ಹೋರಾಟಕ್ಕೆ ನಕ್ಸಲ್ ಯೋಜನೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಪಾಳ ಮಾದರಿ ಹೋರಾಟಕ್ಕೆ ನಕ್ಸಲ್ ಯೋಜನೆ!
ಪಶ್ಚಿಮಘಟ್ಟ ಸೇರಿದಂತೆ ರಾಜ್ಯಾದ್ಯಂತ ಚಳವಳಿ ಮೂಲಕ ಸಶಸ್ತ್ರ ಕಾರ್ಯಾಚರಣೆ ನಡೆಸುತ್ತಿರುವ ನಕ್ಸಲೀಯರ ತಂಡವೊಂದು ಇತ್ತೀಚೆಗೆ ನೇಪಾಳಕ್ಕೆ ಭೇಟಿ ನೀಡಿ, ಅಲ್ಲಿನ ಮಾವೋವಾದಿ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿರುವುದಾಗಿ ವರದಿಯೊಂದು ಬಹಿರಂಗಪಡಿಸಿದೆ.

ಪಶ್ಚಿಮಘಟ್ಟದಲ್ಲಿನ ನಕ್ಸಲ್ ಚಳವಳಿಯನ್ನು ಮತ್ತಷ್ಟು ಸಶಕ್ತವಾಗಿ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ನೇಪಾಳದ ಮಾವೋವಾದಿ ನಾಯಕರೊಂದಿಗೆ ಚರ್ಚೆ ನಡೆಸಿ, ಅಗತ್ಯ ಸಹಕಾರಕ್ಕೆ ಮನವಿ ಮಾಡಿಕೊಂಡಿರುವುದಾಗಿ ನಂಬಲರ್ಹ ಮೂಲಗಳು ತಿಳಿಸಿರುವುದಾಗಿ ಪ್ರಜಾವಾಣಿ ವರದಿ ತಿಳಿಸಿದೆ.

ನೇಪಾಳದಲ್ಲಿ ದಶಕಗಳ ಕಾಲ ಸಶಸ್ತ್ರ ಹೋರಾಟ ನಡೆಸುವ ಮೂಲಕ ರಾಜಪ್ರಭುತ್ವ ಕೊನೆಗಾಣಿಸಿ ಅಧಿಕಾರದ ಗದ್ದುಗೆ ಏರಿದ ಮಾವೋವಾದಿಗಳ ಚಳವಳಿಯನ್ನು ಕಟ್ಟಿದ ಮತ್ತು ಜನಸಾಮಾನ್ಯರನ್ನು ತಮ್ಮತ್ತ ಸೆಳೆದುಕೊಂಡ ಬಗೆಯ ಕುರಿತು ಸಮಗ್ರ ಅಧ್ಯಯನ ನಡೆಸಿ ಬಂದಿರುವ ನಕ್ಸಲೀಯರ ಮುಖಂಡರು, ಇದೀಗ ರಾಜ್ಯದಲ್ಲೂ ನೇಪಾಳ ಮಾದರಿಯ ಹೋರಾಟ ನಡೆಸಲು ಚಿಂತನೆ ನಡೆಸಿರುವುದಾಗಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್‌ಕೌಂಟರ್ ನಂತರ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಮಾವೋವಾದಿಗಳಲ್ಲಿ ಉಂಟಾದ ತಾತ್ವಿಕ ಭಿನ್ನಾಭಿಪ್ರಾಯದಿಂದ ಇಬ್ಭಾಗಗೊಂಡಿರುವ ಗುಂಪೊಂದು ನೇಪಾಳ ಮಾದರಿ ಹೋರಾಟಕ್ಕೆ ಅಖಾಡ ಸಿದ್ದಪಡಿಸತೊಡಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೈದ್ಯರ ಮುಷ್ಕರ ಅಂತ್ಯ
ವೈದ್ಯರ ಮುಷ್ಕರಕ್ಕೆ ಪ್ರತಿಪಕ್ಷಗಳ ಬೆಂಬಲ
ವೈದ್ಯರ ವಿರುದ್ಧ ಹೈಕೋರ್ಟ್‌ಗೆ ದೂರು
ಆಳ್ವ ರಾಜೀನಾಮೆ ಅಂಗೀಕಾರ ಸರಿ: ಆಸ್ಕರ್
ಪ್ರಥಮ ಪಿಯುಸಿಗೆ ಪಬ್ಲಿಕ್ ಪರೀಕ್ಷೆ ಇಲ್ಲ: ಹೆಗಡೆ
ಗರುಡಮಾಲ್ ಪ್ರಕರಣ ಲೋಕಾಯುಕ್ತ ತನಿಖೆಗೆ