ಇತ್ತೀಚೆಗಷ್ಟೇ ಬಂಧಿತನಾದ ಶಂಕಿತ ನಕ್ಸಲ್ ಕೆ.ಜಗನ್ನಾಥ್ ನೀಡಿದ ಮಾಹಿತಿ ಆಧಾರದ ಮೇಲೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನ.11ರಂದು ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗದ ಗೋಪಿವೃತ್ತದಲ್ಲಿ ದೊಡ್ಡಪೇಟೆ ಠಾಣೆಯ ಪೊಲೀಸರು ಜಗನ್ನಾಥನನ್ನು ಬಂಧಿಸಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಮುರುಗನ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಬಂಧನದ ಸಮಯದಲ್ಲಿ ಈತನಿಂದ ನಕ್ಸಲ್ ಸಂಘಟನೆ ಮತ್ತು ಚಟುವಟಿಕೆಗೆ ಸಂಬಂಧಿಸಿದ ಕೆಲವು ಕರಪತ್ರಗಳನ್ನು,ಮಾವೋವಾದದ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.
25ರ ಹರೆಯದ ಜಗನ್ನಾಥ್, ಹೊನ್ನಾಳಿಯ ಟಿ.ಗೋಪಿಗೊಂಡನ ಹಳ್ಳಿಯವನು. ಸಿಎಲ್ಎಫ್ ಕಾರ್ಯಕರ್ತನಾಗಿದ್ದ ಹಾಗೆಯೇ ಮೇರುತಿ ನಕ್ಸಲ್ ಸಂಘಟನೆಯ ತಂಡದ ಸದಸ್ಯನಾಗಿದ್ದ ಎಂದು ಮುರುಗನ್ ವಿವರಿಸಿದರು.
ಜಗನ್ನಾಥ್ ನೀಡಿದ ಸುಳಿವಿನ ಆಧಾರದ ಮೇಲೆ ಕುದುರೆಮುಖ ಅಭಯಾರಣ್ಯದ ಮೇಗೂರು ಗ್ರಾಮದ ಅರಣ್ಯದಲ್ಲಿ ಅಡಗಿಸಿಟ್ಟ 9ಎಂಎಂನ 65 ಗುಂಡುಗಳು, 3ಆರ್‌ಡಿಎಕ್ಸ್, ಕೇಬಲ್ ವೈರ್, 2 ಟ್ಯೂಬ್ಸ ಒಂದು ಸಿ.ಡಿ., 2 ಜಿಲೆಟಿನ್, 1 ಬೈನಾಕುಲರ್, ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. |