ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಜಾತಿರಾಜಕಾರಣ ಅಭಿವೃದ್ಧಿಗೆ ಮಾರಕ: ಕಟ್ಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾತಿರಾಜಕಾರಣ ಅಭಿವೃದ್ಧಿಗೆ ಮಾರಕ: ಕಟ್ಟಾ
NRB
ದೇಶದಲ್ಲಿನ ರಾಜಕೀಯ ಪಕ್ಷಗಳು ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವುದನ್ನು ನಿಲ್ಲಿಸದಿದ್ದಲ್ಲಿ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ವಾರ್ತಾ ಹಾಗೂ ಐಟಿಬಿಟಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ರಾಜಕೀಯ ಪಕ್ಷಗಳು ಜಾತಿ ಲೆಕ್ಕಚಾರದಂತೆ ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಪದ್ಧತಿಯನ್ನು ಬಳಸಿಕೊಂಡು ಬರುತ್ತಿದೆ. ಇದು ತಪ್ಪದಿದ್ದಲ್ಲಿ ಭಾರತದ ರಾಜಕೀಯ ವ್ಯವಸ್ಥೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ಎಲ್ಲಾ ಪಕ್ಷಗಳ ಮುಖಂಡರು ತಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಸೆಕ್ಯುಲರಿಸಂ ಅಲ್ಲ ಅದು ಪ್ಯಾಸಿಸಂ ಎಂದರು.

ಇದೇ ವೇಳೆ ಮಾಧ್ಯಮದವರವನ್ನು ಶ್ಲಾಘಿಸಿದ ಸಚಿವರು, ಮಾಧ್ಯಮದವರ ಶಕ್ತಿ ರಾಜಕಾರಣದ ಶಕ್ತಿಗಿಂತ ದೊಡ್ಡದು. ಇದು ಪ್ರಪಂಚದ ವ್ಯವಸ್ಥೆಯನ್ನೇ ಅಲುಗಾಡಿಸಬಲ್ಲದು. ಮಾಧ್ಯಮದವರ ಪ್ರಚಾರದಿಂದಲೇ ಅಮೆರಿಕದಲ್ಲಿ ಒಬಾಮಾ ಅತ್ಯುನ್ನತ ಹುದ್ದೆಗೆ ಏರಲು ಸಾಧ್ಯವಾಯಿತು ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯಾದ್ಯಂತ ಕನಕ ಜಯಂತಿ
ಕಾಂಗ್ರೆಸ್ ಜತೆ ಮೈತ್ರಿ ಇಲ್ಲ: ಚಲುರಾಯಸ್ವಾಮಿ
ವಿದ್ಯುತ್ ಕಡಿತ: ಪ್ರತಿಭಟನೆಗೆ ಕಾಂಗ್ರೆಸ್ ಸಜ್ಜು
ನ್ಯಾ.ವೆಂಕಟಾಚಲ ಬಿಜೆಪಿಗೆ ಸೇರ್ಪಡೆ ?
ಹಿಂದೂ ದೇವರ ಅವಹೇಳನ ಕರಪತ್ರ: ಸಾರ್ವಜನಿಕರಿಂದ ಥಳಿತ
ಬೌದ್ಧ ಧರ್ಮ-ಅನಾವಶ್ಯಕ ವಿವಾದ: ಪೇಜಾವರ ಶ್ರೀ