ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಎಚ್‌ಡಿಕೆ ನೇಮಕ ದೇವೇಗೌಡರ ನಿರ್ಧಾರವಲ್ಲ: ಹೊರಟ್ಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಚ್‌ಡಿಕೆ ನೇಮಕ ದೇವೇಗೌಡರ ನಿರ್ಧಾರವಲ್ಲ: ಹೊರಟ್ಟಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿಲುವನ್ನು ದೂರವಿಟ್ಟು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ನ.17 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಧಿಕಾರ ಗ್ರಹಣ ಸಮಾರಂಭ ನಡೆಸುವ ಮೂಲಕ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನ ಮಾಡಲಿದೆ ಎಂದು ತಿಳಿಸಿದರು.

ದೇವೇಗೌಡರು ನನಗೆ ಅಧ್ಯಕ್ಷ ಹುದ್ದೆ ಹಾಗೂ ಅನ್ಸಾರಿಗೆ ಕಾರ್ಯದರ್ಶಿ ಹುದ್ದೆ ನೀಡಲು ಒಲವು ತೋರಿದ್ದರು. ಆದರೆ ಕುಮಾರಸ್ವಾಮಿ ಪಕ್ಷ ಸಂಘಟನೆಯಲ್ಲಿ ಜಾಣ್ಮೆ ಹೊಂದಿದ್ದು, ಎಲ್ಲರ ಒತ್ತಾಯದಿಂದ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಯಿತು ಎಂದರು.

ರಾಜ್ಯದಲ್ಲಿ ಬಿಜೆಪಿ ದುರಾಡಳಿತ ನಡೆಸುತ್ತಿದೆ. ವಿದ್ಯುತ್ ಸಮಸ್ಯೆ, ಅಕ್ಕಿ ಗಿರಣಿ, ಬಂದ್, ಪಡಿತರ ಅವ್ಯವಸ್ಥೆ, ಕಾಮಗಾರಿ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ದೂರಿದರು.

ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವಲ್ಲ. ಬಚ್ಚೇಗೌಡರು ದೇವೇಗೌಡರ ವಿರುದ್ಧ ಮಾಡಿದ ಆರೋಪ ವೈಯಕ್ತಿಕವಾದುದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಾತಿರಾಜಕಾರಣ ಅಭಿವೃದ್ಧಿಗೆ ಮಾರಕ: ಕಟ್ಟಾ
ರಾಜ್ಯಾದ್ಯಂತ ಕನಕ ಜಯಂತಿ
ಕಾಂಗ್ರೆಸ್ ಜತೆ ಮೈತ್ರಿ ಇಲ್ಲ: ಚಲುರಾಯಸ್ವಾಮಿ
ವಿದ್ಯುತ್ ಕಡಿತ: ಪ್ರತಿಭಟನೆಗೆ ಕಾಂಗ್ರೆಸ್ ಸಜ್ಜು
ನ್ಯಾ.ವೆಂಕಟಾಚಲ ಬಿಜೆಪಿಗೆ ಸೇರ್ಪಡೆ ?
ಹಿಂದೂ ದೇವರ ಅವಹೇಳನ ಕರಪತ್ರ: ಸಾರ್ವಜನಿಕರಿಂದ ಥಳಿತ