ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿಎಂ ಸೇಡಿನ ರಾಜಕಾರಣ: ದೇವೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಎಂ ಸೇಡಿನ ರಾಜಕಾರಣ: ದೇವೇಗೌಡ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ ನನ್ನ ಮಕ್ಕಳ ವಿರುದ್ಧ ಸೇಡಿನ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಲವತ್ತುಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಅವರು ಅಧಿಕಾರದಲ್ಲಿದ್ದಾಗ ಕೈಗೊಂಡ ನಿರ್ಣಯಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಲು ಹೊರಟಿರುವುದು ಸೇಡಿನ ರಾಜಕಾರಣ ಎಂದು ಅವರು ಆಪಾದಿಸಿದರು.

ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಪಕ್ಷ ಹೊರ ತಂದಿರುವ ಬಿಜೆಪಿ ಸಖ್ಯ ಮತ್ತು ತರುವಾಯ ಪ್ರಮಾದವೇ, ಪ್ರಾಯಶ್ಚಿತ್ತವೇ ಒಂದು ಪ್ರಾಂಜಲ ಅವಲೋಕನ ಎಂಬ ಕೃತಿಯನ್ನು ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಲೋಕಾಯುಕ್ತ ತನಿಖೆ ಸಂಬಂಧ ನೋಟಿಸ್ ಬಂದರೆ ಕುಮಾರಸ್ವಾಮಿಯಾಗಲಿ, ರೇವಣ್ಣ ಆಗಲಿ ಹೆದರಬೇಕಿಲ್ಲ ಲೋಕಾಯುಕ್ತರ ಮುಂದೆ ಹಾಜರಾಗಿ ಸತ್ಯಾಸತ್ಯತೆ ಏನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ತಾವು ಅವರಿಗೆ ಸಲಹೆ ನೀಡಿರುವುದಾಗಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್-ಜೆಡಿಎಸ್ ಅಧಿಕಾರಕ್ಕೆ ಯೋಗ್ಯವಲ್ಲ:ಡಿ.ವಿ
ಎಚ್‌ಡಿಕೆ ನೇಮಕ ದೇವೇಗೌಡರ ನಿರ್ಧಾರವಲ್ಲ: ಹೊರಟ್ಟಿ
ಜಾತಿರಾಜಕಾರಣ ಅಭಿವೃದ್ಧಿಗೆ ಮಾರಕ: ಕಟ್ಟಾ
ರಾಜ್ಯಾದ್ಯಂತ ಕನಕ ಜಯಂತಿ
ಕಾಂಗ್ರೆಸ್ ಜತೆ ಮೈತ್ರಿ ಇಲ್ಲ: ಚಲುರಾಯಸ್ವಾಮಿ
ವಿದ್ಯುತ್ ಕಡಿತ: ಪ್ರತಿಭಟನೆಗೆ ಕಾಂಗ್ರೆಸ್ ಸಜ್ಜು