ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿ ವಿರುದ್ಧ ಒಗ್ಗಟ್ಟಾಗಿ: ಅನಂತಮೂರ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ವಿರುದ್ಧ ಒಗ್ಗಟ್ಟಾಗಿ: ಅನಂತಮೂರ್ತಿ
PTI
ಕಾಂಗ್ರೆಸ್‌ನ ವಂಶ ರಾಜಕಾರಣ, ಭ್ರಷ್ಟಾಚಾರ ನೀತಿಗಳಿಂದ ರೋಸಿ ಹೋಗಿದ್ದ ಲೋಹಿಯಾ ಅವರು ಕಾಂಗ್ರೆಸ್ಸೇತರ ಪಕ್ಷಗಳು ಒಗ್ಗೂಡಬೇಕು ಎಂದು ಕರೆ ನೀಡಿದ್ದರು. ಆದರೆ ಇಂದಿನ ಸನ್ನಿವೇಶದಲ್ಲಿ ಬಿಜೆಪಿಯೇತರ ಶಕ್ತಿಗಳು ಒಗ್ಗಟ್ಟಾಗಬೇಕಾದ ಅಗತ್ಯತೆ ಇದೆ ಎಂದು ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ಹೇಳಿದರು.

ಅವರು ಭಾನುವಾರ ಜೆಡಿಎಸ್ ಕಚೇರಿಯಲ್ಲಿ 'ಬಿಜೆಪಿ ಸಖ್ಯ ಮತ್ತು ತರುವಾಯ-ಪ್ರಮಾದವೇ?ಪ್ರಾಯಶ್ಚಿತ್ತವೇ?-ಒಂದು ಪ್ರಾಂಜಲ ಅವಲೋಕನ' ಎಂಬ ಕಿರು ಹೊತ್ತಿಗೆಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ(ಆರ್‌ಎಸ್‌ಎಸ್)ಸಂಸ್ಥೆ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದರೂ ಕೂಡ ಯಾರೂ ಅದನ್ನು ನಿಷೇಧಿಸಬೇಕು ಎಂದು ಹೇಳುವ ಧೈರ್ಯವನ್ನು ತೋರುತ್ತಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ನಾಯಕರಾಗಿದ್ದ ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಆದರೆ ಅವರು ಅಲ್ಲಿ ನಾಯಕರಾಗಿ ಉಳಿದಿಲ್ಲ. ಪಿ.ಜಿ.ಆರ್ ಸಿಂಧ್ಯ ಸೇರಿದಂತೆ ಈ ಮುಖಂಡರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ವಿರುದ್ಧ ಹೋರಾಡುವಂತೆ ಅವರು ಸಲಹೆ ನೀಡಿದರು.

ಕೆಲ ಪಕ್ಷಗಳ ವಿಚಾರವನ್ನು ಜನತೆಗೆ ತಿಳಿಸುವ ಸಲುವಾಗಿ ರಾಜ್ಯಸಭಾ ಚುನಾವಣೆಗೆ ನಿಂತಿದ್ದೆ. ಆದರೆ ಜೆಡಿಎಸ್ ಆಗಲಿ, ಕಾಂಗ್ರೆಸ್ ಆಗಲಿ ನನ್ನನ್ನು ಬೆಂಬಲಿಸಲಿಲ್ಲ, ಬದಲಿಗೆ ಎರಡೂ ಪಕ್ಷಗಳೂ ಹಣ ಇದ್ದವರನ್ನು ರಾಜ್ಯಸಭೆಗೆ ಕಳುಹಿಸಿದವು. ದೇವೇಗೌಡರೂ ಹಣ ಇದ್ದವರನ್ನೇ ಕಳುಹಿಸಿ ತಪ್ಪು ಮಾಡಿದರು ಅವರು ಪಕ್ಕದಲ್ಲಿಯೇ ಇದ್ದ ಗೌಡರನ್ನು ಕೆಣಕಿ ಮಾತನಾಡಿದರು.

ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಜರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಎಂ ಸೇಡಿನ ರಾಜಕಾರಣ: ದೇವೇಗೌಡ
ಕಾಂಗ್ರೆಸ್-ಜೆಡಿಎಸ್ ಅಧಿಕಾರಕ್ಕೆ ಯೋಗ್ಯವಲ್ಲ:ಡಿ.ವಿ
ಎಚ್‌ಡಿಕೆ ನೇಮಕ ದೇವೇಗೌಡರ ನಿರ್ಧಾರವಲ್ಲ: ಹೊರಟ್ಟಿ
ಜಾತಿರಾಜಕಾರಣ ಅಭಿವೃದ್ಧಿಗೆ ಮಾರಕ: ಕಟ್ಟಾ
ರಾಜ್ಯಾದ್ಯಂತ ಕನಕ ಜಯಂತಿ
ಕಾಂಗ್ರೆಸ್ ಜತೆ ಮೈತ್ರಿ ಇಲ್ಲ: ಚಲುರಾಯಸ್ವಾಮಿ