ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದೇವನಹಳ್ಳಿಗೆ ಹೈ ಸ್ಪೀಡ್ ರೈಲು ಯೋಜನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವನಹಳ್ಳಿಗೆ ಹೈ ಸ್ಪೀಡ್ ರೈಲು ಯೋಜನೆ
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತಿ ಶೀಘ್ರದಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯುವ ಹೈ ಸ್ಪೀಡ್ ರೈಲು ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಸಕ್ತಿ ವಹಿಸಿವೆ.

ಉದ್ದೇಶಿತ ಹೈ ಸ್ಪೀಡ್ ರೈಲು ಯೋಜನೆ ಕಾಮಗಾರಿಯನ್ನು 2009ರ ಮೇನಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಯೋಜನೆ ಪೂರ್ಣಗೊಂಡು ಹೈ ಸ್ಪೀಡ್ ರೈಲು ಸೇವೆ ಆರಂಭಗೊಂಡಾಗ ಕೇವಲ 25 ನಿಮಿಷದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬಹುದಾಗಿದೆ.

ಇದರಂತೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಿಆರ್ ವಿ ಮೈದಾನ, ಹೆಬ್ಬಾಳ, ಯಲಹಂಕ ಮೂಲಕ ದೇವನಹಳ್ಳಿಗೆ ರೈಲು ತೆರಳಲಿದೆ. ಅಲ್ಲದೆ, ಈ ಮೂರು ಸ್ಥಳಗಳಲ್ಲಿ ನಿಲ್ದಾಣದ ವ್ಯವಸ್ಥೆ ಇದೆ.

ಸುಮಾರು 3,700 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಕಾಮಗಾರಿ ಚಾಲನೆ ಪಡೆದು 3 ವರ್ಷ 2 ತಿಂಗಳ ಅವಧಿಯೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೈ ಸ್ಪೀಡ್ ರೈಲು ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆ ಕುರಿತು ಈಗಾಗಲೇ ಉನ್ನತ ಮಟ್ಟದಲ್ಲಿ ಹಲವಾರು ಬಾರಿ ಸಮಾಲೋಚನೆ ಮಾಡಲಾಗಿದೆ. ಯೋಜನೆಯ ರೂಪು ರೇಷೆ ಸಿದ್ದ ಪಡಿಸಲಾಗಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇವೇಗೌಡರು ಸಿಎಂ ಆಗಲು ನಾನು ಕಾರಣ: ಸಿದ್ದು
ದೇವೇಗೌಡ ವಿಷಜಂತುಗಿಂತ ಕ್ರೂರ: ಬಚ್ಚೇಗೌಡ
ಭೀಮಸೇನ ಜೋಶಿಗೆ ಸರ್ಕಾರದಿಂದ ಸನ್ಮಾನ
ಪಕ್ಷ ಸಂಘಟಿಸಿ-ಇಲ್ಲವೇ ನಿವೃತ್ತಿ ಪಡೆಯಿರಿ: ದೇಶಪಾಂಡೆ
ಬೊಮ್ಮಾಯಿ ಸರ್ಕಾರ ಉರುಳಿಸಿದ ಪಾಪಪ್ರಜ್ಞೆ: ಬಚ್ಚೇಗೌಡ
ಎಸ್‌ಇಝಡ್: ಸ್ವಾಮೀಜಿಗಳ ಎದುರೇ ಜಟಾಪಟಿ