ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿನೋದ್ ಕೊಲೆ: ಆರೋಪಿತರಿಗೆ ಜಾಮೀನು ನಿರಾಕರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿನೋದ್ ಕೊಲೆ: ಆರೋಪಿತರಿಗೆ ಜಾಮೀನು ನಿರಾಕರಣೆ
ನಟ ವಿನೋದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವರ್ಧನ್‌ನ ನಾಲ್ವರು ಸಹಚರರಿಗೆ ಸಿಜೆಎಂ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.

ಅಕ್ಟೋಬರ್ 7ರಂದು ಮಾದೇಶ ಚಿತ್ರದ ನಿರ್ಮಾಪಕ ಗೋವರ್ಧನ್ ಮೂರ್ತಿ ನಟ ವಿನೋದ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಬಳಿಕ ಮೂರ್ತಿ ತನ್ನ ಸಹಚರರ ಸಹಾಯದಿಂದ ಕೇರಳದ ರಹಸ್ಯ ಸ್ಥಳದಲ್ಲಿ ಅವಿತುಕೊಂಡಿದ್ದ.

ಕೇರಳದಲ್ಲೇ ಅಡಗಿದ್ದ ಮೂರ್ತಿ ತನ್ನಲ್ಲಿದ್ದ ಹಣ ಖರ್ಚಾದ ಕೂಡಲೇ ತಾನೇ ನೇಮಿಸಿಕೊಂಡಿದ್ದ ಮ್ಯಾನೇಜರ್ ಗೆ ಫೋನ್ ಮಾಡಿ 25 ಲಕ್ಷ ರೂ. ತರುವಂತೆ ಹೇಳಿದ್ದು, ಪೊಲೀಸರಿಗೆ ಬಂಧಿಸುವಲ್ಲಿ ಸಹಾಯವಾಯಿತು.

ಶೂಟೌಟ್ ನಡೆದ ಬಳಿಕ ಮೂರ್ತಿ ಮನೆ, ಕಚೇರಿ ಹಾಗೂ ಆತನೊಂದಿಗೆ ಸಂಪರ್ಕ ಹೊಂದಿರುವ ಫೋನ್‌‌‌ಗಳ ಹೊರ ಹಾಗೂ ಒಳ ಬರುವ ಕರೆಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಮ್ಯಾನೇಜರ್ ಮಾಡಿದ ಕರೆ ಆಧರಿಸಿ ಕೇರಳಕ್ಕೆ ತೆರಳಿದ್ದರು. ಇದೀಗ ಮೂರ್ತಿ ಸಹಚರರಿಗೂ ಸಿಜೆಎಂ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಗೋವರ್ಧನ್ ಮೂರ್ತಿಗೂ ಕೂಡ ಈ ಮೊದಲೇ ಸಿಜೆಎಂ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, ಜಾಮೀನು ನೀಡುವಂತೆ ಕೋರಿ ಮೂರ್ತಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಡಿಎಸ್ ಕಾಯಕಲ್ಪ ಪ್ರತಿಜ್ಞಾ ಸಮಾವೇಶ
ವಿನಿವಿಂಕ್ ಶಾಸ್ತ್ರೀ ಜಾಮೀನು ಅರ್ಜಿ ವಜಾ
ವಿದ್ಯುತ್ ಪೂರೈಕೆಯಲ್ಲಿ ಸರ್ಕಾರ ವಿಫಲ: ಕೃಷ್ಣ
ಜನ ಜೆಡಿಎಸ್ ಕೈ ಬಿಟ್ಟಿದ್ದಾರೆ: ಯಡಿಯೂರಪ್ಪ
ಬಚ್ಚೇಗೌಡರಿಗೆ ಮೂರು ಕೊಲೆ ಬೆದರಿಕೆ
ದೇವನಹಳ್ಳಿಗೆ ಹೈ ಸ್ಪೀಡ್ ರೈಲು ಯೋಜನೆ