ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬುದ್ದಿಜೀವಿಗಳು ರಾಜಕೀಯಕ್ಕೆ ಬರಲಿ: ಸದಾನಂದ ಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬುದ್ದಿಜೀವಿಗಳು ರಾಜಕೀಯಕ್ಕೆ ಬರಲಿ: ಸದಾನಂದ ಗೌಡ
ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಬುದ್ದಿಜೀವಿಗಳು, ವಿದ್ಯಾವಂತರು ರಾಜಕೀಯವನ್ನು ಪ್ರವೇಶಿಸಬೇಕು ಎಂದು ಭಾರತೀಯ ಜನತಾಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಸಲಹೆ ನೀಡಿದ್ದಾರೆ.

ನಗರದಲ್ಲಿ ನಡೆದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ವೈಫಲ್ಯಗಳ ಬಗ್ಗೆ ಪದೇ,ಪದೇ ಖ್ಯಾತೆ ತೆಗೆಯುತ್ತಿರುವ ಬುದ್ದಿಜೀವಿಗಳು ಸ್ವತಃ ರಾಜಕಾರಣ ಪ್ರವೇಶಿಸುವ ಮೂಲಕ ಸುಧಾರಣೆ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.

ಇತ್ತೀಚೆಗೆ ಕೆಲವು ಬುದ್ದಿಜೀವಿಗಳು ರಾಜ್ಯದಲ್ಲಿ ಬಿಜೆಪಿಯೇತರ ಪಕ್ಷಗಳು ಒಗ್ಗೂಡಬೇಕು ಎಂಬುದಾಗಿ ಹೇಳಿಕೆ ನೀಡಿದ್ದಕ್ಕೆ ಪ್ರತಿಯಾಗಿ ಗೌಡರು ಪರೋಕ್ಷವಾಗಿ ಬುದ್ದಿಜೀವಿಗಳಿಗೆ ರಾಜಕೀಯ ಕ್ಷೇತ್ರ ಪ್ರವೇಶಿಸಲು ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕಾಗಿ ಆಡಳಿತ ನಡೆಸುತ್ತಿಲ್ಲ, ಆದರೆ ವಿರೋಧ ಪಕ್ಷಗಳು ಆರಂಭದಿಂದಲೂ ಟೀಕಿಸುತ್ತಲೇ ಬಂದಿವೆ. ಅವುಗಳನ್ನೆಲ್ಲಾ ಸವಾಲಾಗಿ ಸ್ವೀಕರಿಸುವ ಮೂಲಕ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕೇಂದ್ರ ಸಮಿತಿ ಮುಖಂಡರಾದ ಶಿಲ್ಪಾ ಪಟವರ್ಧನ್, ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ವಿಧಾನಪರಿಷತ್ ಸದಸ್ಯ ಶಂಕ್ರಪ್ಪ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಳ್ಳಭಟ್ಟಿ ತಡೆಗೆ ಬಿಗು ಕ್ರಮ: ವಿ.ಎಸ್.ಆಚಾರ್ಯ
ಜೆಡಿಎಸ್ ಕಾರ್ಯಕರ್ತರಿಂದ ಚೆನ್ನಿಗಪ್ಪಗೆ ಥಳಿತ
ವಿನೋದ್ ಕೊಲೆ: ಆರೋಪಿತರಿಗೆ ಜಾಮೀನು ನಿರಾಕರಣೆ
ಜೆಡಿಎಸ್ ಕಾಯಕಲ್ಪ ಪ್ರತಿಜ್ಞಾ ಸಮಾವೇಶ
ವಿನಿವಿಂಕ್ ಶಾಸ್ತ್ರೀ ಜಾಮೀನು ಅರ್ಜಿ ವಜಾ
ವಿದ್ಯುತ್ ಪೂರೈಕೆಯಲ್ಲಿ ಸರ್ಕಾರ ವಿಫಲ: ಕೃಷ್ಣ