ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚಿಕ್ಕಮಗಳೂರು: ಎನ್‌‌ಕೌಂಟರ್‌ಗೆ 3 ನಕ್ಸಲೀಯರ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿಕ್ಕಮಗಳೂರು: ಎನ್‌‌ಕೌಂಟರ್‌ಗೆ 3 ನಕ್ಸಲೀಯರ ಬಲಿ
ಹೊರನಾಡಿನ ಮಾವಿನ ಹೊಲ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಕ್ಸಲೀಯರು ಹಾಗೂ ನಕ್ಸಲ್ ನಿಗ್ರಹ ದಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲೀಯರು ಹಾಗೂ ಓರ್ವ ಪೊಲೀಸ್ ಪೇದೆ ಸಾವನ್ನಪ್ಪಿದ ಘಟನೆ ನಡೆದಿದೆ.

ಹೊರನಾಡಿನ ಮಾವಿನಹೊಲದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸ್ ಪಡೆ ನಡೆಸಿದ ಜಂಟಿ ಕಾರ್ಯಾಚರಣೆ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಮೂವರು ನಕ್ಸಲೀಯರು ಬಲಿಯಾಗಿದ್ದು, ನಕ್ಸಲೀಯರ ಗುಂಡಿಗೆ ಓರ್ವ ಪೊಲೀಸ್ ಪೇದೆ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಪೇದೆ ಗುರುಪ್ರಸಾದ್ ಎಂದು ಗುರುತಿಸಲಾಗಿದ್ದು, ಅವರು ಕೊಡಗು ಭಾಗಮಂಡಲದ ಕುಂದಚೇರಿ ನಿವಾಸಿಯಾಗಿದ್ದಾರೆ.

ನಕ್ಸಲೀಯರು ಹಾಗೂ ಪೊಲೀಸ್ ಪಡೆ ನಡುವೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಹಲವಾರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದು, ಓರ್ವ ಮಹಿಳಾ ನಕ್ಸಲ್ ಈ ಸಂದರ್ಭದಲ್ಲಿ ಪರಾರಿಯಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಇದೀಗ ಹೊರನಾಡಿನಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಮಾವಿನಹೊಲ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ನಕ್ಸಲ್ ನಿಗ್ರಹ ಪಡೆ ಮೂಲಗಳು ಹೇಳಿವೆ.

ಎನ್‌ಕೌಂಟರ್‌ನಲ್ಲಿ ಬಲಿಯಾದವರನ್ನು ರಾಯಚೂರು ಮೂಲದ ಮನೋಹರ್, ಶಿವಮೊಗ್ಗ ಸೊರಬ ನಿವಾಸಿ ನವೀನ್ ಹಾಗೂ ವೆಂಕಟೇಶ್ ಎಂದು ಗುರುತಿಸಲಾಗಿದೆ. ಸೊರಬದ ನವೀನ್ ಮೂಲತಃ ಮೂಡಿಗೆರೆಯವನೆಂದು ಹೇಳಲಾಗಿದೆ, ಈತ ಕೋಮುಸೌಹಾರ್ದ ವೇದಿಕೆ ಸೇರಿದಂತೆ, ಶಿವಮೊಗ್ಗದ ಸ್ಥಳೀಯ ಪತ್ರಿಕೆಯೊಂದರಲ್ಲಿ ಕಾರ್ಯನಿರ್ವಹಿಸಿ ರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಈ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಇತ್ತಂಡಗಳ ಮಧ್ಯೆ ಘರ್ಷಣೆ ಏರ್ಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಗುರುಪ್ರಸಾದ್ ಕುಟುಂಬಕ್ಕೆ 5ಲಕ್ಷ ಪರಿಹಾರ: ಬುಧವಾರ ಮಧ್ನಾಹ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಕ್ಸಲೀಯರ ಗುಂಡಿಗೆ ಬಲಿಯಾದ ಕಾನ್‌ಸ್ಟೇಬಲ್ ಗುರುಪ್ರಸಾದ್ ಅವರ ಕುಟುಂಬಕ್ಕೆ 5ಲಕ್ಷ ಪರಿಹಾರ ಘೋಷಿಸಿದೆ. ಅಲ್ಲದೇ ಗುರುಪ್ರಸಾದ್ ಅವರ ವೇತನವನ್ನು ಹೆಂಡತಿಗೆ ವರ್ಗಾಯಿಸಲಾಗುವುದು ಎಂದು ಸಚಿವ ಸಂಪುಟದ ಸಭೆಯ ಬಳಿಕ ಗೃಹ ಸಚಿವ ವಿ.ಎಸ್.ಆಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಮಾವೇಶ ರಾದ್ಧಾಂತ: ಕುಮಾರಸ್ವಾಮಿ ಕಿಡಿ
ಶಾಸ್ತ್ರೀಯ ಸ್ಥಾನ-ರಾಜ್ಯ ಪ್ರತಿವಾದಿಯಾಗಲಿ: ಚಿಮೂ
ಭಯೋತ್ಪಾದನೆಗೆ ಬಿಜೆಪಿ ಬೆಂಬಲ: ದೇಶ್‌ಮುಖ್
ಹಣ ಹಂಚಿಕೆ ಚೆನ್ನಿಗಪ್ಪ ಹಲ್ಲೆಗೆ ಕಾರಣ: ಕುಮಾರಸ್ವಾಮಿ
ಸ್ಫೋಟ ತನಿಖೆ-ಬಿಜೆಪಿ ಕಂಗಾಲು: ಪೂಜಾರಿ
ಸಚಿವರ ಕಾರ್ಯವೈಖರಿ ಪರಿಶೀಲನೆ: ಸದಾನಂದಗೌಡ