ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿದ್ಯುತ್ ಸಮಸ್ಯೆ: ರೈತ ನೇಣಿಗೆ ಶರಣು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದ್ಯುತ್ ಸಮಸ್ಯೆ: ರೈತ ನೇಣಿಗೆ ಶರಣು
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದೆ ರೈತರು, ಜನಸಾಮಾನ್ಯರು ಕಂಗಾಲಾಗುವಂತಾಗಿದ್ದು, ವಿದ್ಯುತ್ ಸಮಸ್ಯೆಗೆ ಕಂಗೆಟ್ಟ ರೈತನೊಬ್ಬ ಬಲಿಯಾದ ಘಟನೆ ಸಂಭವಿಸಿದೆ.

ವಿದ್ಯುತ್ ಸಮಸ್ಯೆಯಿಂದಾಗಿ ತನ್ನ ಬೆಳೆ ಒಣಗಿ ಹೋಗಿದ್ದರಿಂದ ಹಾಗೂ ಸಾಲದ ಬಾಧೆಯಿಂದ ಮನನೊಂದ ಇಂಡಿ ತಾಲೂಕು ಹೊರ್ತಿ ಗ್ರಾಮದ ರೈತ ಚಂದಪ್ಪ ಶಿವರಾಯ ಪತ್ತಾರ (48) ನೇಣಿಗೆ ಶರಣಾಗಿದ್ದಾರೆ.

ಅವರು ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 21 ಸಾವಿರ ಹಾಗೂ ಖಾಸಗಿಯವರಲ್ಲಿ ಸಾಲ ಮಾಡಿದ್ದ ಚಂದಪ್ಪ, ಬೆಳೆ ಒಣಗಿದ್ದು, ಸಾಲ ತೀರಿಸುವುದು ಹೇಗೆ ಎಂದು ಚಿಂತಿಸಿ ಮಂಗಳವಾರ ತನ್ನ ಹೊಲದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ರಾಜ್ಯಾದ್ಯಂತ ಕಾಡುತ್ತಿರುವ ವಿದ್ಯುತ್ ಅಭಾವ ರೈತರನ್ನು ಕಂಗಾಲಾಗುವಂತೆ ಮಾಡಿದೆ, ಒಂದೆಡೆ ಬೆಳೆ ಸಾಲ, ಇನ್ನೊಂದೆಡೆ ಬೆಳೆ ನಾಶದಿಂದ ರೈತರಾದ ನಾವು ಆತ್ಮಹತ್ಯೆಯಲ್ಲದೆ ನಮಗೆ ಬೇರೆ ದಾರಿ ಇಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಜೆಟ್ ಅನುಷ್ಠಾನ: ಯಡಿಯೂರಪ್ಪ ಅಸಮಾಧಾನ
ಚಿಕ್ಕಮಗಳೂರು: ಎನ್‌‌ಕೌಂಟರ್‌ಗೆ 3 ನಕ್ಸಲೀಯರ ಬಲಿ
ಸಮಾವೇಶ ರಾದ್ಧಾಂತ: ಕುಮಾರಸ್ವಾಮಿ ಕಿಡಿ
ಶಾಸ್ತ್ರೀಯ ಸ್ಥಾನ-ರಾಜ್ಯ ಪ್ರತಿವಾದಿಯಾಗಲಿ: ಚಿಮೂ
ಭಯೋತ್ಪಾದನೆಗೆ ಬಿಜೆಪಿ ಬೆಂಬಲ: ದೇಶ್‌ಮುಖ್
ಹಣ ಹಂಚಿಕೆ ಚೆನ್ನಿಗಪ್ಪ ಹಲ್ಲೆಗೆ ಕಾರಣ: ಕುಮಾರಸ್ವಾಮಿ